ಬೈಕ್ ಸ್ಕಿಡ್ಡಾಗಿ ಸವಾರರು ಗಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದ್ವಿಚಕ್ರ ವಾಹನವೊಂದನ್ನು ತಪ್ಪಿಸುವ ವೇಳೆ ಬೈಕೊಂದು ಸ್ಕಿಡ್ ಆಗಿ ಬೈಕ್ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕೊಕ್ಕರ್ಣೆ ಸೇತುವೆ ಬಳಿ ಬುಧವಾರ ರಾತ್ರಿ ದುರ್ಘಟನೆ ಸಂಭವಿಸಿದೆ. ಬೈಕ್ ಸವಾರ ಕೊಕ್ಕರ್ಣೆ ಪೆಜಮಂಗೂರು ಗ್ರಾಮದ ಗಾಂಧೀನಗರ ನಿವಾಸಿಗಳಾದ ಪ್ರಶಾಂತ ಹಾಗೂ ಸಹಸವಾರ ನವೀನ (32) ಗಂಭೀರ ಗಾಯಗೊಂಡವರು. ಪ್ರಶಾಂತನು ತನ್ನ ಬೈಕಿನಲ್ಲಿ ಹಿಂಬದಿ ಸವಾರನಾಗಿ ನವೀನನ್ನು ಕುಳ್ಳಿರಿಸಿಕೊಂಡು ಕೊಕ್ಕರ್ಣೆಯಿಂದ ಕಾಡೂರುಕಡೆಗೆ ಹೋಗುತ್ತಿದ್ದ ವೇಳೆ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಸೇತುವೆ ಹತ್ತಿರ ಹೊಂಡ ತಪ್ಪಿಸುವಾಗ ಬೈಕ್ ಸ್ಕಿಡ್ ಆಗಿ ಹೊಂಡಕ್ಕೆ ಬಿದ್ದಿದೆ ಎಂದು ದೂರಲಾಗಿದೆ.