ಕಾರು-ಬೈಕ್ ಡಿಕ್ಕಿ : ಸವಾರಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಇಲ್ಲಿನ ಕಾಳಿ ಸೇತುವೆ ಬಳಿ ಬೈಕ್ ಮತ್ತು ಕಾರಿನ ನಡುವೆ ಗುರುವಾರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಮಾಜಾಳಿ ನಿವಾಸಿ ಗಜಾನನ ತದಡಿಕರ್ (27) ಗಾಯಗೊಂಡ ಬೈಕ್ ಸವಾರ. ಇವರು ಮಾಜಾಳಿ ಕಡೆಗೆ ಬೈಕಿನಲ್ಲಿ ತೆರಳುತ್ತಿರುವಾಗ ಓವರಟೆಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ. ಗಾಯಗೊಂಡ ಸವಾರನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.