ಬೈಕಿಗೆ ಅಡ್ಡ ಬಂದ ಶ್ವಾನ : ಸವಾರನಿಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ

ಪಡುಬಿದ್ರಿ : ಬೈಕಿಗೆ ಅಡ್ಡಬಂದ ಶ್ವಾನವೊಂದು ಬೈಕಿಗೇ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರೆ, ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಂಡ್ಕೂರು ಗರಡಿಮನೆ ಬಳಿಯ ನಿವಾಸಿ ಶ್ರೀಪತಿ ಮೊಗೆರಾಯ ಗಂಭೀರ ಗಾಯಗೊಂಡವರು. ಇವರು ಮುಂಜಾನೆ ಹೆಜಮಾಡಿಯಲ್ಲಿ ನಡೆಯಲಿದ್ದ ಪೊಜೆಯಲ್ಲಿ ಪಾಲ್ಗೊಳ್ಳಲು ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ರಾಜ್ಯ ಹೆದ್ದಾರಿಯ ಪಡುಬಿದ್ರಿ ಕಂಚಿನಡ್ಕ ಬಳಿ ಶ್ವಾನವೊಂದು ಅಡ್ಡ ಬಂದು ನೇರವಾಗಿ ಡಿಕ್ಕಿಯಾದ ಪರಿಣಾಮ ಎಸೆಯಲ್ಪಟ್ಟ ಸವಾರರ ತಲೆಗೆ ಗಂಭೀರ ಏಟು ತಗುಲಿದ್ದು, ತಕ್ಷಣ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದ ತೀವ್ರತೆಗೆ ಶ್ವಾನ ಸ್ಥಳದಲ್ಲೇ ಮೃತಪಟ್ಟಿದೆ.

LEAVE A REPLY