ಬೈಕ್ ಸವಾರ ಮೃತ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಲಾವತ್ತಡ್ಕ ಎಂಬಲ್ಲಿ ರಾ ಹೆ 75ರಲ್ಲಿ ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮನೋಜ್ (34) ಎಂಬವರು ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

ಇಚ್ಲ್ಲಂಪಾಡಿಯ ಮಥಾಯಿ ಎಂಬವರ ಮಗನಾಗಿರುವ ಮನೋಜ್ ವಿವಾಹಿತನಾಗಿದ್ದು, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತನ್ನ ಸಹೋದರನ ಮನೆಗೆ ಹೋಗಿ ಬರುತ್ತೇನೆಂದು ಬೈಕಿನಲ್ಲಿ ಹೋಗಿದ್ದಾಗ ಲಾವತ್ತಡ್ಕ ತಿರುವಿನಲ್ಲಿ ಎದುರುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆಯಿತು. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಯತ್ನದಲ್ಲಿದ್ದಾಗಲೇ ಸಾವನ್ನಪ್ಪಿದರೆಂದು ಹೇಳಲಾಗಿದೆ. ಉಪ್ಪಿನಂಗಡಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.