ಬೈಕಿಗೆ ಬಸ್ ಡಿಕ್ಕಿ : ಸವಾರ ಸಾವು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಲ್ಪೆಯ ವಡಭಾಂಡೇಶ್ವರ ಸರ್ಕಲ್ ಬಳಿ ಸೋಮವಾರ ಸಿಟಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಕಾರ್ಕಳ ತಾಲೂಕು ಹೆಬ್ರಿ ಸೋಮೇಶ್ವರ ನಿವಾಸಿ ಮಂಜುನಾಥ ನಾಯ್ಕ ಸಾವನ್ನಪ್ಪಿದ ಬೈಕ್ ಸವಾರ. ಮಂಜುನಾಥ ನಾಯ್ಕನು ಬೈಕನ್ನು ಚಲಾಯಿಸಿಕೊಂಡು ಮಲ್ಪೆ ಕಡೆಯಿಂದ ತೊಟ್ಟಂ ಕಡೆಗೆ ಹೋಗುತ್ತಿದ್ದ ವೇಳೆ ತೊಟ್ಟಂ ಕಡೆಯಿಂದ ಮಲ್ಪೆ ಕಡೆಗೆ ಬರುತ್ತಿದ್ದ

ಗಣೇಶ್ ಮೋಟಾರ್ಸ್ ಎಂಬ ಹೆಸರಿನ ಸಿಟಿ ಬಸ್ಸೊಂದು ವಡಭಾಂಡೇಶ್ವರ ಸರ್ಕಲ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮಂಜುನಾಥ ಬೈಕ್ ಸಮೇತ ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಮಂಜುನಾಥ ನಾಯ್ಕನು ಟೈಲ್ಸ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಮಲ್ಪೆಯಿಂದ ತೊಟ್ಟಂ ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಕಾರಣನಾದ ಸಿಟಿ ಬಸ್ ಚಾಲಕನ ವಿರುದ್ಧ ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.

 

 

LEAVE A REPLY