ಬೈಕಿಗೆ ಬೊಲೆರೋ ಡಿಕ್ಕಿ : ಸವಾರ ಸಾವು

ಕರಾವಳಿ ಅಲೆ ವರದಿ

ಯಲ್ಲಾಪುರ : ಗುಳ್ಳಾಪುರದ ಬಳಿ ಬೈಕಿಗೆ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಸುಬ್ರಾಯ ನಾರಾಯಣ ಭಟ್ಟ ಕೊಡ್ಲಗದ್ದೆ ಎಂಬಾತ ಮೃತಪಟ್ಟವ. ಆರೋಪಿತ ಬೊಲೆರೋ ಚಾಲಕ ಗುಳ್ಳಾಪುರ ಫಾರೆಸ್ಟ್ ಚೆಕ್ಪೋಸ್ಟ್ ಬಳಿ ಹುಬ್ಬಳ್ಳಿಯಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷಿತವಾಗಿ ಚಲಿಸಿಕೊಂಡು ಬಂದು, ವಾಹನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಬೈಕಿಗೆ ಹಿಂಬದಿಯಿಂದ ಅಫಘಾತ ಪಡಿಸಿದ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಹೆಚ್ಚಿನ ಚುಕಿತ್ಸೆಗಾಗಿ ಹುಬ್ಬಳ್ಳಿಗೆ ಒಯುತ್ತಿರುವಾಗ ಮಾವಳ್ಳಿ ಹತ್ತಿರ ಬೈಕ್ ಸವಾರ ಮೃತ ಪಟ್ಟಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಚಾಲಕ ಪರಾರಿಯಾಗಿದ್ದಾನೆ.

 

LEAVE A REPLY