ಬೈಕ್ ಪರಸ್ಪರ ಡಿಕ್ಕಿ : ಸವಾರ ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಬೈಕಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕೊಂದರ ಹಿಂಬದಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಉಪ್ಪೂರು ಗ್ರಾಮದ ಕೆಜಿ ರೋಡ್ ಡಿವೈಡರ್ ಕ್ರಾಸ್ ಬಳಿ ಸಂಭವಿಸಿದೆ.

ಉಪ್ಪೂರು ನಡುಬೆಟ್ಟು ಶ್ರೀಪತಿ ರಾವ್ (52) ತನ್ನ ಬೈಕಿನಲ್ಲಿ ಹಿಂಬದಿ ಸವಾರನಾಗಿ ರಾಜೇಂದ್ರನ್ನು ಕೂರಿಸಿಕೊಂಡು ಕೆಜಿ ರೋಡ್ ಡಿವೈಡರ್ ಕ್ರಾಸ್ ಬಳಿ ಬಲಗಡೆಯ ರಸ್ತೆಗೆ ಹೋಗಲು ನಿಂತಿದ್ದ ವೇಳೆ ಆರೋಪಿ ಬೈಕ್ ಸವಾರ ಅಬ್ದುಲ್ ಮುನಾಫ್ ಉಡುಪಿಯಿಂದ ಬ್ರಹ್ಮಾವರ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಇನ್ನೊಂದು ಬೈಕಿನ ಹಿಂಬದಿ ಸವಾರ ರಾಜೇಂದ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಆರೋಪಿ ಬೈಕ್ ಸವಾರ ಅಬ್ದುಲ್ ಮುನಾಫ್ ವಿರುದ್ಧ್ದ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY