ಬೈಕ್ ಡಿಕ್ಕಿ : ಸವಾರ ಗಂಭೀರ

ಸಾಂದರ್ಭಿಕ ಚಿತ್ರ

 

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿಯ ಸ್ವಾಗತ್ ಬಾರ್ ಎದುರುಗಡೆ ಸ್ಥಳೀಯ ನಿವಾಸಿ ದಿನೇಶ್ ಪೂಜಾರಿ ಬೈಕಿನಲ್ಲಿ ತನ್ನ ತಂಗಿ ಚೈತ್ರ ಕುಮಾರಿಯೊಂದಿಗೆ ಕಟೀಲು ದೇವಸ್ಥಾನದಿಂದ ಸುರತ್ಕಲ್ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಕಿನ್ನಿಗೋಳಿ ಸ್ವಾಗತ್ ಬಾರ್ ಎದುರುಗಡೆಯಿಂದ ರಮೇಶ್ ಕೋಟ್ಯಾನ್ ಯಾವುದೇ ಸೂಚನೆ ನೀಡದೇ ಬೈಕಿನಲ್ಲಿ ಒಮ್ಮೇಲೆ ಬಂದು ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ದಿನೇಶರ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಸಹ ಸವಾರೆ ಚೈತ್ರ ಕೂಡ ಗಂಭೀರ ಗಾಯಗೊಂಡು ಸುರತ್ಕಲ್ ಖಾಸಗಿ ಆಸ್ತತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ದಿನೇಶ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.