ಮೆಸ್ಕಾಂ ಅಧಿಕಾರಿಗಳ ವಿರುದ್ಧ ನಿವೃತ್ತ ಸಿಬ್ಬಂದಿ ಲಂಚ ದೂರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಒಂದು ದಿನ ಬಿಲ್ ಕಟ್ಟುವುದು ತಡವಾದರೆ ಸಾಕು ಸಂಪರ್ಕ ಕಡಿತಕ್ಕೆ ಬರುವ ಮೆಸ್ಕಾಂ ಇಲಾಖೆಯ ಹಿರಿಯ ಸಿಬ್ಬಂದಿಗಳಿಬ್ಬರು ನಿವೃತ್ತರಾಗುತ್ತಿದ್ದ ಹಿರಿಯ ಸಿಬ್ಬಂದಿಯೊಬ್ಬರ ಉಪದಾನ ಬಿಡುಗಡೆ ಸಂದರ್ಭ ಲಂಚಕ್ಕೆ ಡಿಮ್ಯಾಂಡ್ ಮಾಡಿದ ಘಟನೆ ಉಡುಪಿ ಮೆಸ್ಕಾಂ ಕಚೇರಿಯಲ್ಲಿ ನಡೆದಿದೆ. ಈ ಬಗ್ಗೆ ಆರೋಪಿಗಳಿಬ್ಬರಲ್ಲಿ  ಒಬ್ಬರನ್ನು ಮಾತ್ರ ಅಮಾನತುಗೊಳಿಸಲಾಗಿದ್ದು, ಮÀತ್ತೋರ್ವ ಆರೋಪಿ ಅಮಾನತ್ತಿನ ಬಗ್ಗೆ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಉಡುಪಿಯ ಮೆಸ್ಕಾಂ ಕಚೇರಿಯಲ್ಲಿ ಸೀನಿಯರ್ ಮೆಕ್ಯಾನಿಕ್ ಆಗಿದ್ದ ಮಹಮದ್ ಎನ್ನುವವರು ನಿವೃತ್ತಿಯ ವೇಳೆ ಇಲಾಖೆಯಿಂದ ಬರಬೇಕಾದ ಉಪದಾನದ ಮೊತ್ತವನ್ನು ಪಡೆಯಲು ಪ್ರಯತ್ನಿಸಿದರಾದರೂ ಗಿರೀಶ್ ಹಾಗೂ ಸತೀಶ್ ಎಂಬುವರು ಅರವತ್ತು ಸಾವಿರ ರೂಪಾಯಿ ಹಣ ನೀಡುವಂತೆಯೂ, ಇಲ್ಲದಿದ್ದರೆ ನಿಮಗೆ ಹಣ ಸಿಗುವುದಿಲ್ಲ ಎಂತಲೂ ಹೇಳಿ ಹಣ ವಸೂಲಿ ಮಾಡಿದ್ದಾರೆನ್ನಲಾಗಿದೆ.

ಈ ಬಗ್ಗೆ ಸಾಕಷ್ಟು ನೋವುಂಡ ಮಹಮ್ಮದ್ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚÀರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸತೀಶ್ ಎಂಬಾತನನ್ನು ಅಮಾನತು ಮಾಡಲಾಗಿದ್ದು, ಗಿರೀಶನ ವಿರುದ್ಧ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಅಲ್ಲದೇ ಆರೋಪಿ ಗಿರೀಶ್ ಮೆಸ್ಕಾ ಸಿಬ್ಬಂದಿಗಳ ಜಿಲ್ಲಾ ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾಗಿದ್ದು, ಅಧಿಕಾರಿಗಖು ಆತನ ದಾಳಕ್ಕೆ ಬಲಿಯಾಗುತ್ತಿದ್ದಾರೆಯೇ ಎಂದು ಪ್ರಶ್ನಿಸಲಾಗಿದೆ.  ಎರಡು ದಿನಗಳೊಳಗೆ ಗಿರೀಶನನ್ನು ಅಮಾನತು ಮಾಡದೇ ಇದ್ದರೆ ಮತ್ತೆ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವುದಾಗಿ ಮಹಮದ್ ಎಚ್ಚರಿಸಿದ್ದಾರೆ.