ಸೇವಾ ಶುಲ್ಕದ ರೆಸ್ಟಾರೆಂಟುಗಳು ಕ್ರಮ ಎದುರಿಸುವ ಸಾಧ್ಯತೆ

 ನವದೆಹಲಿ : ಗ್ರಾಹಕರಿಂದ ಸೇವಾ ಶುಲ್ಕ ವಸೂಲಿ ಮಾಡುವ ರೆಸ್ಟಾರೆಂಟುಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಸಜ್ಜಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮವಿಲಾಸ್ ಪಾಸ್ವಾನ್ ಆವರ ಪ್ರಕಾರ  ಈ ಸೇವಾ ಶುಲ್ಕ `ಟಿಪ್ಸ್’ಗೆ ಸಮಾನವಾಗಿದ್ದು ಅದನ್ನು ನೀಡುವಂತೆ ಯಾವುದೇ ರೆಸ್ಟಾರೆಂಟ್ ಗ್ರಾಹಕರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಸದ್ಯದ ಕಾನೂನಿನಂತೆ ಸೇವಾ ಶುಲ್ಕ ವಿಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವಾದರೂ ಇದನ್ನು ಸಾಧ್ಯವಾಗಿಸಲು ರಾಜ್ಯ ಸರಕಾರಗಳಿಗೆ ಒಂದು ಮಾರ್ಗಸೂಚಿಯನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದ್ದು ಗ್ರಾಹಕ ಹಕ್ಕುಗಳಿಗೆ ಹೋರಾಡುವ ಸಂಘಟನೆಗಳಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದ್ದಾರೆ.