ಸಮಸ್ಯೆಯಲ್ಲಿ ಸನ್ನಿ

ಸೆಕ್ಸ್ ಬಾಂಬ್ ಸನ್ನಿ ಲಿಯೋನ್ ರೂಪದರ್ಶಿಯಾಗಿರುವ ಕಾಂಡೋಮ್ ಜಾಹೀರಾತು ಬ್ಯಾನ್ ಮಾಡುವಂತೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ಘಟಕ ಆಗ್ರಹಿಸಿದೆ.

“ಸನ್ನಿ ಲಿಯೋನ್ ಮಾಡೆಲ್ ಆಗಿರುವ ಕಾಂಡೋಮ್ ಜಾಹೀರಾತು ಮಹಿಳೆಯರಿಗೆ ಮುಜುಗರವನ್ನುಂಟುಮಾಡುತ್ತದೆ. ಅಲ್ಲದೇ ಅಶ್ಲೀಲವಾದ ದೃಶ್ಯಗಳನ್ನು ಹೊಂದಿದ್ದು, ವೀಕ್ಷಕರಿಗೆ ವಿಭಿನ್ನವಾದ ಸಂದೇಶ ರವಾನೆ ಮಾಡುತ್ತದೆ” ಎಂದು ಆರ್‍ಪಿಐ ಪಕ್ಷದ ಮಹಿಳಾ ಘಟಕದ ಕಾರ್ಯದರ್ಶಿ ಶೀಲಾ ಗಂಗುರ್‍ಡೆ ದೂರಿದ್ದಾರೆ.

ಕಾಂಡೋಮ್ ಜಾಹೀರಾತು ದಿನಕ್ಕೆ ಹಲವಾರು ಬಾರಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು, ಇದರಿಂದ ಕುಟುಂಬ ಸಮೇತರಾಗಿ ಟಿವಿ ನೋಡುವ ಮಹಿಳೆಯರಿಗೆ ಮುಜುಗರ ಉಂಟಾಗುತ್ತಿದೆ. ಮಹಿಳೆಯರಿಗೂ ಧಾರಾವಾಹಿಗೂ ಬಿಡಿಸಲಾಗÀದ ನಂಟಿದೆ. ಅವರು ಅದನ್ನು ನೋಡುತ್ತಿರುವಾಗ ಮಧ್ಯೆ ಸನ್ನಿ ಜಾಹೀರಾತು ಬಂದರೆ ಅವರಿಗೆ ಮಕ್ಕಳು ಮತ್ತು ಗಂಡನೆದುರು ಮುಜುಗರವಾಗುವುದು ಸಹಜವೇ. ಅದಲ್ಲದೇ ಇದರಿಂದ ಇಲ್ಲಿನ ಜನರ ನೈತಿಕ ತತ್ವಗಳು ಮತ್ತು ಧಾರ್ಮಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಹಾಗಾಗಿ ಈ ಜಾಹೀರಾತು ಬ್ಯಾನ್ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಹಿಂದೆಯೂ ಸನ್ನಿಯ `ಮ್ಯಾನ್ ಫೆÇೀರ್ಸ್’ ಕಾಂಡೋಮ್ ಜಾಹೀರಾತು ನಿಷೇಧಕ್ಕೆ ಗೋವಾದ ಮಹಿಳಾ ಸಂಘಟನೆಯೊಂದು ಆಗ್ರಹಿಸಿತ್ತು.