ಹೆಜಮಾಡಿಕೋಡಿ ಸ್ವಾಗತ್ ಬದಲಿಗೆ ಬೇರೆ ಬಸ್ ಹಾಕಿ

ಸಾಂದರ್ಭಿಕ ಚಿತ್ರ

ಮುಂಜಾನೆ 5.50ಕ್ಕೆ ಹೆಜಮಾಡಿಕೋಡಿಯಿಂದ ಮಂಗಳೂರಿಗಾಗಿ ಉಳ್ಳಾಲ ಕಡೆ ಹೋಗುತ್ತಿದ್ದ ಸ್ವಾಗತ್ ಟ್ರಾವೆಲ್ಸ್ ಸರ್ವೀಸ್ ಬಸ್ ಕಳೆದ ಐದಾರು ತಿಂಗಳಿನಿಂದ ಸಂಚಾರ ಸ್ಥಗಿತಗೊಳಿಸಿದೆ  ಕಾರಣ ಕೇಳಿದರೆ ಅಂತೆ  ಕಂತೆಗಳ ಉತ್ತರ. ಈ ಬಸ್ಸನ್ನು ನಂಬಿ ಬೆಳಿಗ್ಗೆ ಕೆಲಸಕ್ಕೆ ಹೋಗುವ ದೂರ ದೂರದ ಶಿಫ್ಟ್ ಪ್ರಕಾರ ಕೆಲಸ ಮಾಡುವ ಕಾರ್ಮಿಕರಿಗೆ  ಧಕ್ಕೆಗೆ ಮೀನು ತರಲು ಹೋಗುವ ಮಹಿಳೆಯರಿಗೆ ಆಗುತ್ತಿರುವ ಕಷ್ಟ ಹೇಳತೀರದು  ಸ್ವಲ್ಪ ಸಮಯ ಈ ಬಸ್ಸಿನ ಬದಲಿಗೆ ಸುರಗಿರಿ  ಮಂಗಳೂರು ಟ್ರಾವೆಲ್ಸ್ ಬಸ್ ಓಡಾಡಿದರೂ ಆ ಬಸ್ಸುಗಳಿಗೆ ಸ್ಥಿg ಯಾನವೇ ಇರಲಿಲ್ಲ  ಎರಡೂ ಬಸ್‍ಗಳೂ ಹೇಳದೇ ಕೇಳದೆ ಟ್ರಿಪ್ ಸ್ಥಗಿತಗೊಳಿಸಿದೆ
ಈ ಹಿಂದೆಲ್ಲ ಈ ಟ್ರಿಪ್‍ನ ಬಸ್ಸುಗಳು ಮುಂಜಾನೆ ವೇಳೆ ತುಂಬಿ ತುಳುಕುತ್ತಿತ್ತು. ಅದೇ ರೀತಿ ಈ ಬಸ್ ಜ್ಯೋತಿಯಿಂದ ಉಳ್ಳಾಲತನಕ ವೇಗದೂತ ಬಸ್ ಆಗಿ ಓಡುತ್ತಿರುವಾಗ ಒಳ್ಳೆಯ ಕಲೆಕ್ಷನ್ ಬರುತ್ತಿತ್ತು  ಆದರೆ ಏಕಾಏಕಿ ಬಸ್ಸನ್ನು ಯಾಕೆ ನಿಲ್ಲಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ  ಆದ್ದರಿಂದ ಈ ಬಸ್ಸಿನ ಬದಲಿಗೆ ಸುಸ್ಥಿತಿಯಲ್ಲಿರುವ ಬಸ್ಸನ್ನು ಹಾಕಿ ನಿತ್ಯ ಸಂಚಾರಿಸುವ ಪ್ರಯಾಣಿಕರಿಗೆ ಉಪಕಾರ ಮಾಡಬೇಕಿದೆ

  • ಎಂ ಪ್ರವೀಣ್ ಕರ್ಕೇರ ಹೆಜಮಾಡಿ