ಪಿವಿಎಸ್ ಬಳಿ ಫುಟ್ಪಾತ್ ಸರಿಪಡಿಸಿ

ನಗರದ ಕೊಡಿಯಾಲಬೈಲ್ ಬಳಿ ಚರಂಡಿ ನೀರಿಗೆ ಹರಿಯಲು ಹಾಕಲಾದ ಚಪ್ಪಡಿ ಕಲ್ಲು ಇಂದೋ ನಾಳೆಯೋ ಮುರಿದು ಬೀಳುವ ಸಾಧ್ಯತೆ ಇದೆ. ಜನ ಗಮನಿಸದೇ ಅದರ ಮೇಲೆ ಕಾಲಿಡುವಾಗ ಎಲ್ಲಿ ಮುರಿದು ಹೊಂಡಕ್ಕೆ ಬೀಳುತ್ತವೆಯೋ ಎಂಬ ಭಯ ಕಾಡುತ್ತಿರುತ್ತದೆ. ಇದೇ ರೀತಿ ನಗರದ ಒಳ ರಸ್ತೆಗಳಲ್ಲಿ ಫುಟ್ಪಾತ್ ವ್ಯವಸ್ಥೆ ಸರಿಯಾಗಿಲ್ಲ. ಹೆಚ್ಚಿನ ಫುಟ್ಪಾತುಗಳಿಗೆ ಚಪ್ಪಡಿ ಕಲ್ಲನ್ನೇ ಹಾಸಿರುತ್ತಾರೆ ಈ ಚಪ್ಪಡಿ ಕಲ್ಲು ಹೆಚ್ಚಾಗಿ ಮುರಿದು ಬೀಳುತ್ತದೆ. ಈಗಿನ ವಾಹನ ದಟ್ಟಣೆಯಿಂದ ಪಾದಚಾರಿಗಳು ಫುಟ್ಪಾತನ್ನೇ ಅವಲಂಬಿಸಬೇಕಾಗುತ್ತದೆ ಇಂತಹ ಸಂದರ್ಭ ಮುರಿದು ಬಿದ್ದ ಚಪ್ಪಡಿ ಕಲ್ಲಿನ ಎಡೆಗೆ ಕಾಲು ಸಿಲುಕಿಕೊಂಡರೆ ಪಾದಚಾರಿಗೆ ಅಪಾಯ ಆದ್ದರಿಂದ ಪಾಲಿಕೆ ಸಂಬಂಧಪಟ್ಟವರು ತೀರಾ ದುಃಸ್ಥಿತಿಯಲ್ಲಿರುವ ಚಪ್ಪಡಿ ಕಲ್ಲು ಬದಲಾಯಿಸಿ ಅಪಾಯ ತಪ್ಪಿಸಬೇಕಾಗಿದೆ

  • ನವೀನ್ ಕೋಟ್ಯಾನ್  ಕೊಡಿಯಾಲಬೈಲ್