ಅಳಪೆ ಕಣ್ಣಗುಡ್ಡೆ ನೂಜಿ ಹದಗೆಟ್ಟ ರಸ್ತೆ ಸರಿಪಡಿಸಿರಿ

ಸಾಂದರ್ಭಿಕ ಚಿತ್ರ

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಳಪೆ ಕಣ್ಣಗುಡ್ಡೆ ಬಸ್ ನಿಲ್ದಾಣದಿಂದ ನೂಜಿಗೆ ಹೋಗುವ ರಸ್ತೆ ತೀರಾ ಹದಗೆಟ್ಟು ಹೋಗಿದ್ದು, ನಡೆದು ಹೋಗಲು ಕೂಡಾ ಜನಸಾಮಾನ್ಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ ಈ ರಸ್ತೆ ತಗ್ಗು ರಸ್ತೆಯಾಗಿದ್ದು ರಸ್ತೆಯ ಜಲ್ಲಿ ಕಿತ್ತುಹೋಗಿ ಹಲವಾರು ಸಮಯಗಳೇ ಕಳೆದುಹೋಗಿದ್ದು ವಾಹನ ಚಲಾಯಿಸುವವರು ಜೀವ ಕೈಯಲ್ಲಿಟ್ಟುಕೊಂಡು ಹೋಗುವುದು ಅನಿವಾರ್ಯ ದ್ವಿಚಕ್ರ ವಾಹನ ಚಲಾಯಿಸುವವರಂತೂ ತಪ್ಪಿಯೂ ಈ ಸಾಹಸ ಮಾಡುವಂತಿಲ್ಲ ಹಾಗೆಯೇ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿದವರು ಹಲವಾರು ಮಂದಿ ಬಿದ್ದು ಗಾಯಗೊಂಡ ಪ್ರಕರಣಗಳು ನಡೆದಿವೆ ಹಾಗಿದ್ದೂ ಕೂಡಾ ಮಹಾನಗರ ಪಾಲಿಕೆ ಈ ರಸ್ತೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ ಇನ್ನಾದರೂ ಈ ಏರಿಯಾದ ಜನಪ್ರತಿನಿಧಿಗಳು ಮನಪಾ ಮಹಾಪೌರರು, ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಆದ್ಯತೆ ನೀಡುವರೇ ಕಾದು ನೋಡಬೇಕಿದೆ

  • ಸುಹಾನ್ ಕೋಟ್ಯಾನ್  ಕಣ್ಣಗುಡ್ಡೆ