ನವೀಕೃತ ಭಟ್ಕಳ ಅರ್ಬನ್ ಬ್ಯಾಂಕ್ ಕಟ್ಟಡ ಉದ್ಘಾಟನೆ

ಭಟ್ಕಳ : ಕಾರ್ಪೊರೇಟ್ ಮಾದರಿಯ ಆಲ್ಕೋ ಪೆನೆಲಿಂಗ್ ವಿನ್ಯಾಸವನ್ನು ಅಳವಡಿಸಿ ನವೀಕೃತಗೊಳಿಸಲಾದ ಇಲ್ಲಿನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮುಖ್ಯ ಕಚೇರಿ ನಿನ್ನೆ  ಸಂಜೆ ಶಾಸಕ ಉದ್ಘಾಟನೆಯಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥೆಗೊಳಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ತ್ವರಿತ ಹಾಗೂ ದಕ್ಷ ಸೇವೆ ನೀಡುತ್ತಿರುವ ಬ್ಯಾಂಕ್ ಐಎಸ್‍ಒ 9001-2015 ಪ್ರಮಾಣ ಪತ್ರವನ್ನು ಪಡೆದಿದ್ದನ್ನು  ಹಾಂಗ್ಯೊ ಐಸ್‍ಕ್ರಿಮ್ ವ್ಯವಸ್ಥಾಪಕ ನಿರ್ದೇಶಕ  ಪ್ರದೀಪ ಜಿ ಪೈ ಹಸ್ತಾಂತರಿಸಿದರು.