ಸಾರ್ವಜನಿಕ ಲಾಭಕ್ಕೆ ಧಾರ್ಮಿಕ ಜಾಗ ಬಳಕೆ `ಓಕೆ’ : ಹೈಕೋರ್ಟ್ ಆದೇಶ

ಅಲಹಾಬಾದ್ : ಸಾರ್ವಜನಿಕರ ಲಾಭಕ್ಕಾಗಿ ಬಳಸಿಕೊಳ್ಳಲು ಧಾರ್ಮಿಕ ಪ್ರಾರ್ಥನಾ ಕೇಂದ್ರಗಳನ್ನು ಸ್ವಾಧೀನಪಡಿಸಬಹುದದೆಂದು ಅಲಹಾಬಾದ್ ಹೈಕೋರ್ಟ್ ನಿನ್ನೆ ಹೇಳಿದೆ.

ಆದಾಗ್ಯೂ ಕ್ರಿಸ್ಮಸ್ ವೇಳೆ ಚರ್ಚೊಂದು ನೆಲಸಮಗೊಳಿಸುವುದು “ತೀರಾ ಅತಿಯಾದ” ಕ್ರಮವಾಗುತ್ತದೆ ಎಂದಿರುವ ಕೋರ್ಟ್, ಒಂದು ತಿಂಗಳವರೆಗೆ ಚರ್ಚ್ ಧ್ವಂಸ ನಡೆಸದಂತೆ ಆದೇಶಿಸಿದೆ. ಚರ್ಚುಗಳ ಉತ್ತರ ಭಾರತ ಟ್ರಸ್ಟ್ ಅಸೋಸಿಯೇಶನ್ ಸಲ್ಲಿಸಿದ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ನ್ಯಾಯಾಲಯ ತನ್ನ ಆದೇಶದಲ್ಲಿ ಈ ರೀತಿ ವಿವರಿಸಿದೆ.

ಒಂದು ತಿಂಗಳ ಬಳಿಕ ಈ ಚರ್ಚ್ ನೆಲಸಮಗೊಳಸಬೇಕು ಅಥವಾ ಸ್ಮಶಾನದತ್ತ ಸ್ಥಳಾಂತರಿಸಬೇಕೆಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಎಚ್‍ಎಐ) ಕೋರ್ಟ್ ನಿರ್ದೇಶಿಸಿದೆ. ಶಿಕೊಹಬಾದ್ ಜಿಲ್ಲೆಯ ಈ ಚರ್ಚೊಂದರ ಜಾಗವೊಂದನ್ನು ಸ್ವಾಧೀನಪಡಿಸುವ ಉದ್ದೇಶದಿಂದ ಅಸೋಸಿಯೇಶನ್ ಕೋರ್ಟ್ ಮೆಟ್ಟಿಲೇರಿತ್ತು.