ಧರ್ಮಾಧರಿತ ಮೀಸಲಾತಿ ಮತ್ತೊಂದು ಪಾಕ್ ಸೃಷ್ಟಿಗೆ ಹೇತು : ನಾಯ್ಡು ಎಚ್ಚರ

ಹೈದರಾಬಾದ್ : ಮುಸ್ಲಿಮರಿಗೆ ಮೀಸಲಾತಿ ಮತ್ತೊಂದು ಪಾಕಿಸ್ತಾನ ಸೃಷ್ಟಿಸಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಮತ್ತು ಐ&ಬಿ ಸಚಿವ ವೆಂಕಯ್ಯ ನಾಯ್ಡು ಎಚ್ಚರಿಸಿದರು. “ಧರ್ಮದ ಹಿನ್ನೆಲೆಯಲ್ಲಿ ಈ ದೇಶ ವಿಭಜನೆಗೊಂಡಿತ್ತು. ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಿಗೆ ಬದುಕುವುದಕ್ಕೆ ಮುಸ್ಲಿಂ ಲೀಗ್  ವಿರೋಧ ವ್ಯಕ್ತಪಡಿಸಿತ್ತು. ಇದರಿಂದಾಗಿ ಈ ದೇಶ ವಿಭಜನೆಗೊಂಡಿತ್ತು. ಒಂದೊಮ್ಮೆ ನಾವು ಮತ ಬ್ಯಾಂಕ್ ರಾಜಕೀಯ ನಡೆಸಿದರೆ ಮತ್ತೊಮ್ಮೆ ಪಾಕಿಸ್ತಾನ ಸೃಷ್ಟಿಗೆ ಎಡೆಯಾದೀತು” ಎಂದವರು ಹೇಳಿದರು.