ಮದುವೆಯಾದ ಹುಡುಗಿ ಜೊತೆ ಸಂಬಂಧ

ಪ್ರ : ನಾನೊಂದು ಮಾಲ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮದೇ ಮಳಿಗೆಯಲ್ಲಿ ಕೆಲಸ ಮಾಡುವ ಒಬ್ಬಳು ಹುಡುಗಿಯ ಜೊತೆ ಸಂಬಂಧ ಹೊಂದಿದ್ದೇನೆ.  ಅವಳಿಗೆ 25 ವರ್ಷ ಅಷ್ಟೇ. ಮದುವೆಯಾಗಿ ಒಂದು ವರ್ಷವಾಗಿದೆ. ಆದರೆ ಅವಳು ಗಂಡನ ಜೊತೆ ಸುಖವಾಗಿಲ್ಲವಂತೆ. ಅವಳ ಅತ್ತೆಗೆ ಹಣದ ದಾಹವಂತೆ. ಅವಳು ತನ್ನ ಕತೆಯನ್ನೆಲ್ಲ ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಳು. ನಾನು ಅವಳಿಗೆ ಸಮಾಧಾನ ಹೇಳುತ್ತಿದ್ದೆ. ನಮ್ಮಿಬ್ಬರ ನಡುವೆ ಹೀಗೇ ಸ್ನೇಹ ಬೆಳೆಯಿತು. ಅವಳಾಗಿಯೇ ಬಯಸಿ ನನ್ನ ರೂಮಿಗೆ ಮೊದಲು ಬಂದಿದ್ದು. ಅನೇಕ ಬಾರಿ ಅವಳೂ ನಾನೂ ಸೆಕ್ಸ್ ನಡೆಸಿದ್ದೇವೆ. ಅವಳ ಬಯಕೆ ತಿಳಿದ ನಂತರವೇ ನಾನು ಮುಂದುವರಿದಿದ್ದು. ಆದರೆ ಈಗ ಅವಳು ತನ್ನ ಗಂಡನಿಗೆ ವಿಚ್ಛೇದನ ಕೊಟ್ಟು ನನ್ನನ್ನು ಮದುವೆಯಾಗಲು ಬಯಸುತ್ತಿದ್ದಾಳೆ. ನಾನೇನೂ ಅವಳನ್ನು ಪ್ರೀತಿಸುತ್ತಿಲ್ಲ. ಮದುವೆ ಯಾಗಬೇಕೆನ್ನುವ ಆಲೋಚನೆಯಂತೂ ಮೊದಲೇ ಇಲ್ಲ. ನಮ್ಮ ಮನೆಯಲ್ಲಿ ವಿಚ್ಛೇದಿತ ಹುಡುಗಿಯನ್ನು ಸೊಸೆಯಾಗಿ ಸ್ವೀಕರಿಸುವುದೂ ಇಲ್ಲ ಅಂತ ನನಗೆ ಗೊತ್ತು. ಅವಳ ಇರಾದೆ ಗೊತ್ತಾದ ನಂತರ ಅವಳು ಹತ್ತಿರ ಬರುವುದೂ ನನಗಿಷ್ಟವಾಗುತ್ತಿಲ್ಲ. ಆದರೆ ಅವಳು ನನ್ನನ್ನು ತುಂಬಾ ಹಚ್ಚಿಕೊಂಡುಬಿಟ್ಟಿದ್ದಾಳೆ.  ಅವಳ ಗಂಡನಿಗೂ ಈಗ ಅವಳ ಬಗ್ಗೆ ಸಂಶಯ ಬಂದಿದೆಯಂತೆ. ಇಂತಹ ಸನ್ನಿವೇಶದಲ್ಲಿ ನಾನು ಏನು ಮಾಡಬೇಕೆಂತಲೇ ಗೊತ್ತಾಗುತ್ತಿಲ್ಲ. ದಯವಿಟ್ಟು ಸಲಹೆ ಕೊಡಿ ಪ್ಲೀಸ್.

: ಮದುವೆಯಾದ ಹುಡುಗಿಯ ಜೊತೆ ಮಲಗಲು ಗಟ್ಸ್ ಇದೆ ಆದರೆ ಈಗ ಅವಳು ವಿಚ್ಛೇದನೆ ಕೊಟ್ಟು ಹೊರಬಂದರೆ ಅವಳಿಗೆ ಬಾಳು ಕೊಡಲು ಮನಸ್ಸಿಲ್ಲ ಅಂದರೆ ನೀವೆಂತಹ ಗೋಸುಂಬೆ ಅಂತ ಇದರಿಂದಲೇ ಅರಿವಾಗುತ್ತದೆ. ಅವಳು ತನ್ನ ದಾಂಪತ್ಯದಲ್ಲಿ ಸುಖವಾಗಿಲ ್ಲ; ಯಾವ ಸಮಯದಲ್ಲೂ ಅವಳು ಆ ಸಂಬಂಧದಿಂದ ಹೊರಬಂದು ನಿಮ್ಮ ಜೊತೆ ಬಾಳಲು ಬಯಸಬಹುದು ಅಂತ  ಅನಿಸದಿರುವಷ್ಟು ಮುಗ್ಧರೇ ನೀವು? ಬಹುಶಃ ನೀವು ತೋರಿಸಿದ ಆಸ್ಥೆಯಿಂದ ಅವಳನ್ನು ನೀವು ಪ್ರೀತಿಸುತ್ತಿದ್ದೀರಿ ಮತ್ತು ಅವಳಿಗೆ ನೀವು ಆಸರೆಯಾಗಿ ನಿಲ್ಲಬಲ್ಲಿರಿ ಅನ್ನುವ ವಿಶ್ವಾಸದಿಂದಲೇ ಅವಳು ನಿಮ್ಮ ಜೊತೆ ದೈಹಿಕ ಸಂಪರ್ಕಕ್ಕೂ ರೆಡಿ ಯಾಗಿರಬಹುದು. ಅವಳಿಗಂತೂ ಬುದ್ಧಿಯಿಲ್ಲ. ಹಿಂದೆಮುಂದೆ ಆಲೋಚಿಸದೇ ನಿಮ್ಮ ಮೇಲೆ ಭರವಸೆ ಇಟ್ಟು ತನ್ನ ದಾಂಪತ್ಯವನ್ನೂ ಮೆಸ್ ಮಾಡಿಕೊಂಡುಬಿಟ್ಟಿದ್ದಾಳೆ. ಕಟ್ಟಿಕೊಂಡ ಗಂಡನಿಗೂ ಮೋಸ ಮಾಡುತ್ತಿದ್ದಾಳೆ. ನಿಮಗೆ ಅವಳ ಮೇಲೆ ಬರೀ ದೈಹಿಕ ಆಕರ್ಷಣೆ ಮಾತ್ರ ಮತ್ಯಾವುದೂ ಇಲ್ಲ ಅಂತ ಗೊತ್ತಿದ್ದರೂ ಅವಳ ದುರ್ಬಲತೆಯ ಲಾಭ ಪಡೆದಿರಿ. ನಿಮಗೆ ಅವಳನ್ನು ಮದುವೆಯಾಗಲು ಸ್ವಲ್ಪವೂ ಇಷ್ಟವಿಲ್ಲದಿದ್ದರೆ ಇನ್ನಾದರೂ ಕೂಡಲೇ ಅವಳಿಗೆ ಹೇಳಿಬಿಡಿ. ಅವಳ ದಾಂಪತ್ಯವನ್ನೇ ಸರಿಮಾಡಿ ಕೊಳ್ಳುವಂತೆ ಈಗಲಾದರೂ ತಿಳಿಸಿ ಅವಳ ಜೊತೆಗಿನ ಎಲ್ಲ ಸಂಪರ್ಕ ಕಡಿದುಕೊಳ್ಳಿ. ಅವಳಿಗೆ ನೀವೂ ಇಲ್ಲ, ಗಂಡನಿಂದಲೂ ದೂರ ಎನ್ನುವ ಪರಿಸ್ಥಿತಿ ಬಾರದಿರಲಿ ಅಷ್ಟೇ.