ಕೆಂಪಡಿಕೆ ದರ ಭಾರೀ ಏರಿಕೆ

ಶಿರಸಿ : ಕಳೆದ 15 ದಿನಗಳಿಂದ ನಿಧಾನಗತಿಯಲ್ಲಿ ಶಿರಸಿ ಮಾರುಕಟ್ಟೆಯಲ್ಲಿ ದರ ಏರಿಕೆ ಕಂಡ ಕೆಂಪಡಿಕೆ ದರವೂ ಒಮ್ಮೇಲೆ ಶನಿವಾರ 4,000-5,000 ರೂ ಏರಿದ್ದು, ಇದೀಗ ಕೆಂಪಡಿಕೆ ದರವೂ 52,000 ರೂಪಾಯಿಗೆ ವಾರಾಂತ್ಯದಲ್ಲಿ ನಿಂತಿದೆ. ಚಾಲಿ ದರವೂ 26,000 ರೂ ಸ್ಥಿರವಾಗಿರುವುದು ಕಂಡುಬಂದಿದೆ.

ಐದಾರು ತಿಂಗಳ ಹಿಂದೆ 25-30,000 ರೂ ಒಳಗೆ ಇದ್ದ ಕೆಂಪಡಿಕೆ ದರವೂ 15 ದಿನದ ಹಿಂದೆ ಮಾಲಿನ ಕೊರತೆ ಹಾಗೂ ಇತರ ಕಾರಣಗಳಿಗೆ ಒಮ್ಮೇಲೆ 35,000 ರೂಪಾಯಿಗೆ ಏರಿ, ಕಳೆದ ವಾರದಲ್ಲಿ 41,000 ರೂಪಾಯಿಗೆ ಬಂದು ನಿಂತಿತು. ಇದೀಗ ವಾರಾಂತ್ಯಕ್ಕೆ 52,000 ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ಸಹ ಅಡಿಕೆ ಮಾಲಿನ ಕೊರತೆಯಿಂದ ಒಂದು ತಿಂಗಳ ಕಾಲ ಅಡಿಕೆ ದರ ನಾಗಾಲೋಟದಲ್ಲಿ ಏರಿ 80,000 ರೂ ತನಕ ಹೋಗಿ ನಿಂತಿತ್ತು. ನಂತರ ಇಳಿಕೆ ಕಂಡು 25-30,000 ರೂಪಾಯಿಗೆ ಬಂದು ನಿಂತಿತ್ತು. ನೀರಿನ ಕೊರತೆಯಿಂದ ಕಳೆದ 2 ವರ್ಷದಿಂದ ಅಡಿಕೆ ಬೆಳೆಯ ಇಳುವರಿ ಶೇ 25ರಷ್ಟು ಕಡಿಮೆ ಆಗಿದ್ದು, ಮಾಲಿನ ಕೊರತೆಯಿಂದ ದರ ಏರಿಕೆಯಾಗಿದೆ.