ಮುಂಬೈ ಟೆಸ್ಟ್ : ದಾಖಲೆಗಳ ಸುರಿಮ

ನಾಲ್ಕನೆಯ ಟೆಸ್ಟ್ಟಿನ ನಾಲ್ಕನೆಯ ದಿನದ ಆಟದಲ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ ಭಾರತದ ಆಟಗಾರರು ಹಲವಾರು ವರ್ಷಗಳ ದಾಖಲೆಗಳನ್ನು ಮುರಿದಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್  ಜೀವನದಲ್ಲಿ ಮೂರನೆಯ ದ್ವಿಶತಕ ಬಾರಿಸುವ ಮೂಲಕ ಭಾರತಕ್ಕೆ 231 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ದೊರಕಿಸಿದ್ದೇ ಅಲ್ಲದೆ ಭಾರತ ಇಂಗ್ಲೆಂಡ್ ವಿರುದ್ಧ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಅಂತರದಿಂದ ಜಯ ಗಳಿಸಿ ಸರಣಿಯನ್ನೂ 3-0 ಅಂತರದಲ್ಲಿ ಗೆಲ್ಲಲು ಸಾಧ್ಯವಾಗಿದೆ.

ನಾಲ್ಕನೆಯ ಟೆಸ್ಟ್ಟಿನ ನಾಲ್ಕನೆಯ ದಿನದ ಆಟದಲ್ಲಿ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ ಭಾರತದ ಆಟಗಾರರು ಹಲವಾರು ವರ್ಷಗಳ ದಾಖಲೆಗಳನ್ನು ಮುರಿದಿದ್ದಾರೆ. ಆಲರೌಂಡ್ ಆಟಗಾರ ಜಯಂತ್ ಯಾದವ್ ತಮ್ಮ ಮೂರನೆಯ ಟೆಸ್ಟ್ ಪಂದ್ಯದಲ್ಲೇ ತಮ್ಮ ಚೊಚ್ಚಲ ಶತಕ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 2016ರಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಒಂದು ವರ್ಷದಲ್ಲಿ ಅತ್ಯಂತ ಹೆಚ್ಚಿನ ದ್ವಿಶತಕ ಗಳಿಸಿದ ಭಾರತೀಯ ಆಟಗಾರರೆನಿಸಿದ್ದಾರೆ. ಇದಕ್ಕೂ ಮುನ್ನ ವಿನೋದ್ ಕಾಂಬ್ಲಿ , ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹವಾಗ್ ಮತ್ತು ಸಚಿನ್ ತೆಂಡೂಲ್ಕರ್ ಒಂದು ವರ್ಷದ ಅವಧಿಯಲ್ಲಿ ಎರಡು ದ್ವಿಶತಕ ಬಾರಿಸಿದ್ದರು. ವರ್ಷಕ್ಕೆ ಮೂರು ದ್ವಿಶತಕ ಬಾರಿಸುವವರ ಪೈಕಿ ಕೊಹ್ಲಿ ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್ (4-2012), ಡಾನ್ ಬ್ರಾಡ್‍ಮನ್ (3-1930), ರಿಕಿ ಪಾಂಟಿಂಗ್ (3 -2003) ಮತ್ತು ನ್ಯೂಜಿಲೆಂಡಿನ ಬ್ರೆಂಡನ್ ಮೆಕುಲಮ್ (3-2014) ಈ ದಾಖಲೆ ನಿರ್ಮಿಸಿದ್ದರು.

india

ವಿರಾಟ್ ಗಳಿಸಿದ 235 ರನ್ ಭಾರತದ ಕಪ್ತಾನನೊಬ್ಬ ಗಳಿಸಿದ ಗರಿಷ್ಠ ಸ್ಕೋರ್ ಆಗಿದ್ದು ಧೋನಿ ಗಳಿಸಿದ್ದ 224 ರನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತದ ಪರವಾಗಿ ಅತ್ಯಧಿಕ ರನ್ ವಿರಾಟ್ ಗಳಿಸಿದ್ದಾರೆ. ವಿನೋದ್ ಕಾಂಬ್ಲಿಯ 224 ರನ್ ದಾಖಲೆಯನ್ನು ಮುರಿದಿದ್ದಾರೆ. ಭಾರತದ ಕ್ಯಾಪ್ಟನ್ನುಗಳು ಏಳು ದ್ವಿಶತಕ ಬಾರಿಸಿದ್ದಾರೆ. ಅವುಗಳ ಪೈಕಿ ಮೂರು ಕೊಹ್ಲಿಯ ಪಾಲಿಗೆ ಸೇರುತ್ತವೆ. ಯಾವುದೇ ಭಾರತದ ಕ್ಯಾಪ್ಟನ್ ಎರಡು ದ್ವಿಶತಕ ಗಳಿಸಿರಲಿಲ್ಲ. ದ್ವಿಶತಕ ಗಳಿಸಿದ ಇತರ ಕ್ಯಾಪ್ಟನ್‍ಗಳೆಂದರೆ ಪಟೌಡಿ, ಗವಾಸ್ಕರ್, ಸಚಿನ್ ಮತ್ತು ಎಂ ಎಸ್ ಧೋನಿ. ಒಂಬತ್ತನೆಯ ಆಟಗಾರರಾಗಿ ಶತಕ ಗಳಿಸಿದ ಜಯಂತ್ ಯಾದವ್ ಈ ಸ್ಥಾನದಲ್ಲಿ ಶತಕ ಗಳಿಸಿದ ಪ್ರಥಮ ಭಾರತೀಯ ಆಟಗಾರರಾಗಿದ್ದಾರೆ.

ಎಂಟನೆಯ ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ ಮತ್ತು ಯಾದವ್ ಪೇರಿಸಿದ 241 ರನ್ 8ನೆಯ ವಿಕೆಟ್‍ಗೆ ದಾಖಲೆ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದಿನ್ ಮತ್ತು ಅನಿಲ್ ಕುಂಬ್ಲೆ 8ನೆಯ ವಿಕೆಟ್‍ಗೆ ದಕ್ಷಿಣ ಆಫ್ರಿಕಾ ವಿರುದ್ಧ 161 ರನ್ ಪೇರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟಿನಲ್ಲೂ ಜಯಂತ್ ಯಾದವ್ 2012ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ವಿರೇಂದ್ರ ಸೆಹ್ವಾಗ್ ಅವರ ಜೊತೆಗೂಡಿ 392 ರನ್ ಸೇರಿಸಿದ್ದರು.

ಭಾರತದ ಪ್ರಥಮ ಇನ್ನಿಂಗ್ಸಿನಲ್ಲಿ ಇಂಗ್ಲೆಂಡಿನ್ ಸ್ಪಿನ್ ಬೌಲರುಗಳು 118.3 ಓವರ್ ಬೌಲ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 1993ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಡ್ಡಿ ಹೆಮ್ಮಿಂಗ್ಸ್, ಫಿಲ್ ಟಫ್ನಲ್ ಮತ್ತು ಗ್ರಾಹಂ ಹಿಕ್ ಒಟ್ಟು 127.3 ಓವರ್ ಬೌಲ್ ಮಾಡಿದ್ದರು. ಈ ಸರಣಿಯಲ್ಲಿ ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ 640 ರನ್ ಗಳಿಸಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯಾವುದೇ ಭಾರತೀಯ ಬ್ಯಾಟ್ಸಮನ್ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ. 2002ರಲ್ಲಿ ರಾಹುಲ್ ದ್ರಾವಿಡ್ 602 ರನ್ ಗಳಿಸಿದ್ದರು. ವಿರಾಟ್ ಈ ದಾಖಲೆ ಮುರಿದಿದ್ದಾರೆ.

ಭಾರತೀಯ ಉಪಖಂಡದ ಯಾವುದೇ ಆಟಗಾರರೂ ಈ ಗರಿಷ್ಟ ಸ್ಕೋರ್ ತಲುಪಿಲ್ಲ ಎನ್ನುವುದು ಹೆಮ್ಮೆಯ ವಿಚಾರ. ಈ ಟೆಸ್ಟಿನಲ್ಲಿ ಭಾರತ ಗಳಿಸಿದ 631 ರನ್ ಇಂಗ್ಲೆಂಡ್ ವಿರುದ್ಧ ಗಳಿಸಿದ ಅತ್ಯಧಿಕ ಮೊತ್ತವಾಗಿದ್ದು 1993ರಲ್ಲಿ ಗಳಿಸಿದ್ದ 591 ರನ್ ದಾಖಲೆಯನ್ನು ಹಿಂದಿಕ್ಕಲಾಗಿದೆ. ವಿರಾಟ್ ಕೊಹ್ಲಿ ಎರಡು ಸರಣಿಗಳಲ್ಲಿ 600ಕ್ಕೂ ಹೆಚ್ಚು ರನ್ನ ಗಳಿಸಿದ್ದಾರೆ. 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 600 ರನ್ ಗಳಿಸಿದ್ದರು. ಭಾರತದ ಪರ ಒಂದು ಸರಣಿಯಲ್ಲಿ 600 ಹೆಚ್ಚು ರನ್ ಎರಡು ಬಾರಿ ಗಳಿಸಿರುವ ಕೊಹ್ಲಿ ಸುನಿಲ್ ಗವಾಸ್ಕರ್ ಮತ್ತು ರಾಹುಲ್ ದ್ರಾವಿಡ್ ಅವರೊಡನೆ ಸೇರಿದ್ದಾರೆ. ಒಂಭತ್ತನೆಯ ಶ್ರೇಯಾಂಕದಲ್ಲಿ ಬ್ಯಾಟಿಂಗ್ ಮಾಡಿ 221ರನ್ ಗಳಿಸಿದ ಜಯಂತ್ ಯಾದವ್ ಈ ಶ್ರೇಯಾಂಕದ ಯಾವುದೇ ಬ್ಯಾಟ್ಸ್‍ಮನ್ ತಮ್ಮ ಚೊಚ್ಚಲ ಸರಣಿಯಲ್ಲಿ ಗಳಿಸಿದ ರನ್ ಮಿತಿಯನ್ನು ಮೀರಿದ್ದಾರೆ.