ಕಟೀಲು ದುರ್ಗಾಪರಮೇಶ್ವರೀ ದೇಗುಲದಲ್ಲಿ ದಾಖಲೆ ವಿವಾಹ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ 72 ಜೋಡಿಗಳಿಗೆ ವಿವಾಹ ನಡೆಯಿತು.

ಬೆಳಗ್ಗಿನಿಂದಲೇ ಕಟೀಲು ಭಕ್ತರಿಂದ ತುಳುಕುತ್ತಿದ್ದು, ದೇವಸ್ಥಾನದ ರಥಬೀದಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ರಥಬೀದಿಯಲ್ಲಿವ್ಯಾಪಾರಸ್ಥರು ಸೀಯಾಳ ಮತ್ತಿತರ ಸಾಮಗ್ರಿಗಳನ್ನು ಹಾಕುತ್ತಿರುವುದರಿಂದ ಭಕ್ತರಿಗೆ ನಡೆದುಕೊಂಡು ದೇವಸ್ಥಾನದ ಒಳಗಡೆ ಹೋಗಲು ಅಸಾಧ್ಯವಾದ ಪರಿಸ್ಥಿತಿ ಉಂಟಾಯಿತು. ರಥಬೀದಿಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿರುವ ಬಸ್ಸುಗಳನ್ನು ನಿಲ್ಲಿಸುವುದರಿಂದ ಮತ್ತಷ್ಟು ಸಂಚಾರಕ್ಕೆ ಅಡಚಣೆ ಉಂಟಾಯಿತು. ದೇವಳದ ಅಂಗಣದಲ್ಲಿ ಭಕ್ತರು ಕುಳಿತುಕೊಳ್ಳುತ್ತಿರುವುದರಿಂದ ದೇವಳದ ಒಳಗಡೆ ಹೋಗಲು ನೂಕುನುಗ್ಗಲು ಉಂಟಾಗಿದ್ದು, ಭಕ್ತರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು.