ಜೆಡಿಎಸ್ ನಾಯಕತ್ವ ವಿರುದ್ಧ ಬಂಡುಕೋರ ಶಾಸಕರ ಕಿಡಿ

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಿನ್ನೆ ಶಾಸಕ ಚೆಲವರಾಯಸ್ವಾಮಿ ಆಯೋಜಿಸಿದ್ದ ಬೃಹತ್ ರ್ಯಾಲಿಯೊಂದರಲ್ಲಿ ಜೆಡಿಎಸ್ ಬಂಡುಕೋರ ಶಾಸಕರು ಮತ್ತು ಅವರ ಬೆಂಬಲಿಗರು ಪಕ್ಷನಾಯಕತ್ವದ ವಿರುದ್ಧ ಕಿಡಿಕಾರಿದರು.ರ್ಯಾಲಿಯಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಿರುವ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಶಾಸಕರಾದ ಜಮೀರ್ ಅಹ್ಮದ್, ರಮೇಶ್ ಬಂಡಿಸಿದ್ದೇಗೌಡ, ಬಾಲಕೃಷ್ಣ, ಶ್ರೀನಿವಾಸಮೂರ್ತಿ ಮತ್ತು ಎಂಎಲ್ಸಿ ಪುಟ್ಟಣ್ಣ ಮನಸ್ವೇಚ್ಚೆ ಟೀಕಿಸಿದರು.ಇದೇ ವೇಳೆ, ಅಂಬೇಡ್ಕರ್ ಜಯಂತಿಯ ನಿಮಿತ್ತ ನಿನ್ನೆ ಪ್ರಾಣಿ ಬಲಿದಾನ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದ್ದರೂ ಇವರ ಸಭೆ ಬಳಿಕ ಚೆಲುವರಾಯಸ್ವಾಮಿಯ ನೂರಾರು ಬೆಂಬಲಿಗರಿಗೆ ಮಾಂಸಾಹಾರಿ ಊಟ ಬಡಿಸಲಾಗಿತ್ತು.