ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಾಚನಾ ಪಕ್ಷಾಚರಣೆ

ಕುಂಜತ್ತೂರು ಶಾಲೆಯಲ್ಲಿ ನಡೆದ ವಾಚನಾ ಪಕ್ಷಾಚರಣೆ

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೂನ್ 19ರಿಂದ ಜುಲೈ 7ರ ತನಕ ಎರಡು ವಾರ ನಡೆಯಲಿರುವ ವಾಚನಾ ಪಕ್ಷಾಚರಣೆಗೆ ಚಾಲನೆ ನೀಡಲಾಯಿತು.

ಶಾಲಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮವನ್ನು ಮಂಜೇಶ್ವರ ಲೈಬ್ರೈರಿ ಕೌನ್ಸಿಲ್ ಕಾರ್ಯದರ್ಶಿ ಹುಸೈನ್ ಮಾಸ್ಟರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅನಿವಾರ್ಯ ವಾಗಿದೆ. ಓದಿನಿಂದ ಜ್ಞಾನ ಭಂಡಾರ ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಪೆÇೀಷಕರು ಕೂಡಾ ದಿನದಲ್ಲೊಂದಷ್ಟು ಸಮಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ನಿಯಮಿತವಾದ ಓದು ಜ್ಞಾನರ್ಜನೆಗೆ ದಾರಿಯಾಗಬಲ್ಲದು” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಲ್ಲಾ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಪಣಿಕ್ಕರರು 1945ರಲ್ಲಿ ತಿರುವಿತಾಂಕೂರು ಗ್ರಂಥಶಾಲಾ ಸಂಘಂ (ಟ್ರಾವೆಂಕೂರ್ ಲೈಬ್ರರಿ ಎಸೋಸಿಯೇಶನ್) ಸ್ಥಾಪಿಸಿ 47 ಗ್ರಾಮೀಣ ಲೈಬ್ರರಿಗಳನ್ನು ಸ್ಥಾಪಿದರು. ಈ ಸಂಘದ ಘೋಷಣಾ ವಾಕ್ಯವೇ “ಓದಿರಿ ಮತ್ತು ಬೆಳೆಯಿರಿ” ಎಂಬುದಾಗಿತ್ತು. 1956ರಲ್ಲಿ ಕೇರಳ ರಾಜ್ಯದ ಉದಯವಾದಾಗ ಇದು ಕೇರಳ ಗ್ರಂಥಶಾಲಾ ಸಂಘವಾಗಿ ರೂಪೀಕರಣಗೊಂಡಿತು.  ಪಿ ಎನ್ ಪಣಿಕ್ಕರ್ 1995 ಜೂನ್ 19ರಂದು ಅವರ 86ನೇ ವಯಸ್ಸಿನಲ್ಲಿ ವಿಧಿವಶರಾದರು. ಅವರ ಗೌರವಾರ್ಥ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ಸ್ಮರಣೆಗಾಗಿ ಕೇರಳ ಸರಕಾರ ಪ್ರತೀ ವರ್ಷ ಜೂನ್ 19ರಂದು ಎಲ್ಲಾ ಶಾಲೆ, ಕಾಲೇಜು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನಾ ದಿನ (ರೀಡಿಂಗ್ ಡೇ) ಅಂದಿನಿಂದ ಈ ವಚನಾ ಪಕ್ಷಾಚರಣೆ ನಡೆಸಲಾಗುತ್ತಿದೆ.