2 ಆರ್ಟಿಐ ಅರ್ಜಿ, ಒಂದೇ ಪ್ರಶ್ನೆ ; ಆರ್ಬಿಐದಿಂದ ವಿಭಿನ್ನ ಉತ್ತರ !

ನವದೆಹಲಿ : ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಎರಡು ಆರ್ಟಿಐ ಅರ್ಜಿಗಳು ಕೇಳಿದ ಒಂದೇ ಪ್ರಶ್ನೆಗೆ ರಿಸರ್ವ್ ಬ್ಯಾಂಕ್ ಒಡೆತನದ ಮುದ್ರಣಾಲಯಗಳು ವಿಭಿನ್ನ ಉತ್ತರ ನೀಡಿ ಜನರ ಹುಬ್ಬೇರಿಸಿವೆ.

ಆರ್ಟಿಐ ಅರ್ಜಿಯೊಂದಕ್ಕೆ ಜನವರಿ 7ರಂದು ನೀಡಿದ ತನ್ನ ಉತ್ತರದಲ್ಲಿ ರಿಸರ್ವ್ ಬ್ಯಾಂಕ್, ಪ್ರಧಾನಿ  ನರೇಂದ್ರ ಮೋದಿ ನೋಟು ರದ್ದತಿ  ಘೋಷಣೆ ಮಾಡಿದ ಎರಡು ವಾರಗಳ ನಂತರ ಅಂದರೆ ನವೆಂಬರ್ 23ರಿಂದಷ್ಟೇ  ಹೊಸ 500 ರೂಪಾಯಿ ನೋಟುಗಳ ಮುದ್ರಣದ ಮೊದಲ ಹಂತವನ್ನು ಕರ್ನಾಟಕÀದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ ಲಿ ಇಲ್ಲಿ ಆರಂಭಿಸಲಾಗಿತ್ತು ಎಂದು ಹೇಳಿತ್ತು.

ಆದರೆ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದ್ ಮೂಲದ ಆರ್ಟಿಐ ಕಾರ್ಯಕರ್ತ ಪರಾಗ್ ಪಟೇಲ್ ಅವರು  ಸಲ್ಲಿಸಿದ ಅರ್ಜಿಯೊಂದಕ್ಕೆ ಉತ್ತರ ನೀಡಲು ನಾಸಿಕ್ ಮೂಲದ ಆರ್ಬಿಐ ಮುದ್ರಣಾಲಯ ನಿರಾಕರಿಸಿ, ಇದು ದೇಶದ ಏಕತೆ ಮತ್ತು ಸಾರ್ವಭೌಮತೆಗೆ  ಬೆದರಿಕೆಯೊಡ್ಡಬಹುದೆಂಬ ನೆಪ ಹೇಳಿತ್ತು.

“ನೀವು ಕೇಳೀದ ಪ್ರಶ್ನೆಗೆ ಮಾಹಿತಿಯನ್ನು ಆರ್ಟಿಐ ಕಾಯಿದೆ 2005 ಇದರ ಸೆಕ್ಷನ್ 8(1) (ಎ) ಹಾಗೂ ಸೆಕ್ಷನ್ 7 (9) ಅನ್ವಯ ನೀಡಲು ಸಾಧ್ಯವಿಲ್ಲ. ಅದು ದೇಶದ ಏಕತೆ. ಸುರಕ್ಷತೆ, ಸಾರ್ವಭೌಮತೆ  ಹಾಗೂ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು” ಎಂಬ ಉತ್ತರ ನೀಡಲಾಗಿತ್ತು.