`ಕುರುಕ್ಷೇತ್ರ’ದಲ್ಲಿ ರವಿಚಂದ್ರನ್

ಇದೀಗ ಇತಿಹಾಸ ಮರುಕಳಿಸುತ್ತಿದೆ ಎಂದೇ ಅನಿಸುತ್ತಿದೆ. ಒಂದು ಕಾಲದಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ಚಿತ್ರವೇ ವಿಜೃಂಭಿಸುತ್ತಿತ್ತು. ನಂತರ ಸಾಮಾಜಿಕ ಚಿತ್ರಗಳು, ಪ್ರೇಮಕತೆಗಳೇ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಜಾಸ್ತಿ ಓಡುತ್ತಿತ್ತು. ಇದೀಗ ಮತ್ತೆ ಪೀರಿಯಡ್ ಡ್ರಾಮಾಗೆ ಬೆಲೆ ಬರುತ್ತಿದೆ. ಹಿಂದಿಯಲ್ಲೂ ಅಂತಹ ಚಿತ್ರಗಳೇ ಈಗ ಗಲ್ಲಾಪೆಟ್ಟಿಗೆಯಲ್ಲಿ ಜಾಸ್ತಿ ಕಲೆಕ್ಷನ್ ಮಾಡುತ್ತಿವೆ. ಈಗ `ಬಾಹುಬಲಿ’ ಚಿತ್ರದ ನಂತರವಂತೂ ಮತ್ತಿಷ್ಟು ಅದೇ ರೀತಿಯ ರಾಜಮಹಾರಾಜರ ಕತೆಗಳ ಕ್ರೇಜ್ ಹೆಚ್ಚುವ ನಿರೀಕ್ಷೆ ಇದೆ.

ಈಗ ಕನ್ನಡದಲ್ಲಿ `ಕುರುಕ್ಷೇತ್ರ’ ಚಿತ್ರವನ್ನು ಮುನಿರತ್ನ ಅವರು ನಿರ್ಮಿಸುತ್ತಿದ್ದು ಈಗಾಗಲೇ ದರ್ಶನ್ ದುರ್ಯೋಧನನ ಪಾತ್ರಕ್ಕೆ ಆಯ್ಕೆಯಾಗಿದ್ದಾನೆ. ಇದೀಗ ರವಿಚಂದ್ರನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಮೂಲಗಳ ಪ್ರಕಾರ ರವಿಚಂದ್ರನ್ ಧರ್ಮರಾಯನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಅಂಬರೀಶ್, ಸುದೀಪ್, ಪುನೀತ್, ಶಿವರಾಜಕುಮಾರ, ಯಶ್ ಮೊದಲಾದವರೂ `ಕುರುಕ್ಷೇತ್ರ’ದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಇನ್ನು ಅನುಷ್ಕಾ ಶೆಟ್ಟಿ ದ್‍ಔಪದಿಯಾಗಲಿದ್ದಾಳೆ ಎನ್ನಲಾಗಿದೆ. ಅಂತೂ ಇದೊಂದು ಬಿಗ್ ಬಜೆಟ್ ಚಿತ್ರವಾಗಲಿದ್ದು ಬಹುತಾರಾಗಣ ಹೊಂದಿರುವ ಸಿನಿಮಾವಾಗಲಿದೆ.