ಮೊಬೈಲ್ ಮೂಲಕ ಪಡಿತರ ಮಾಹಿತಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪಡಿತರ ಕಾರ್ಡುದಾರರಿಗೆ ಪ್ರತೀ ತಿಂಗಳು ಲಭಿಸುವ ಪಡಿತರ ಸಾಮಗ್ರಿಗಳ ಕುರಿತಾದ ಮಾಹಿತಿಯನ್ನು ಮೊಬೈಲ್ ಮೂಲಕ ತಿಳಿಸುವ ಸೌಕರ್ಯ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಏರ್ಪಡಿಸಿದೆ.

ರಾಜ್ಯದಲ್ಲಿ 80 ಲಕ್ಷದಷ್ಟು ಪಡಿತರ ಕಾರ್ಡ್ ಬಳಕೆದಾರರಿದ್ದಾರೆ. ಈ ಪೈಕಿ ಶೇ 80ರಷ್ಟು ಮಂದಿ ನಾಗರಿಕ ಪೂರೈಕೆ ಇಲಾಖೆಗೆ ತಮ್ಮ ಮೊಬೈಲ್ ಫೆÇೀನ್ ನಂಬ್ರ ತಿಳಿಸಿದ್ದು, ಓಣಂ ಹಬ್ಬದ ವೇಳೆ ಪರೀಕ್ಷಣಾರ್ಥ ಈ ಮೊಬೈಲ್ ಮಾಹಿತಿ ಹಂಚುವಿಕೆಯ ಪ್ರಯೋಗ ನಡೆಸಲಾಗಿತ್ತು. ಅದು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪಿ ತಿಲೋತ್ತಮನ್ ತಿಳಿಸಿದ್ದಾರೆ.

ಕೆಲವು ಪಡಿತರ ಅಂಗಡಿಗಳಲ್ಲಿ ಸರಿಯಾದ ರೀತಿಯ ಪಡಿತರ ಸಾಮಗ್ರಿ ವಿತರಣೆ ನಡೆಯುತ್ತಿಲ್ಲವೆಂಬ ಬಗ್ಗೆ ದೂರುಗಳು ಬಂದಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ತಿಂಗಳಿನಿಂದ ಇ-ಫೆÇೀನ್ ಯಂತ್ರ ಸ್ಥಾಪಿಸಲಾಗುವುದು. ಇದರಿಂದ ಪಡಿತರ ಕಾರ್ಡ್ ಬಳಕೆದಾರರು ಸಾಮಗ್ರಿ ಖರೀದಿಸಿದ ತಕ್ಷಣ ಆ ಕುರಿತಾದ ಸಂದೇಶ ಅವರ ಮೊಬೈಲಿಗೆ ಲಭಿಸುವುದೆಂದು ಸಚಿವರು ತಿಳಿಸಿದ್ದಾರೆ.

ಹಸಿರು ಕಾರ್ಡುದಾರರಿಗೆ 28 ಕಿಲೋ ಅಕ್ಕಿ ಮತ್ತು 7 ಕಿಲೋ ಗೋಧಿ, ಗುಲಾಬಿ ಬಣ್ಣದ ಕಾರ್ಡಿನ ಪ್ರತಿ ಸದಸ್ಯರಿಗೆ ತಲಾ ನಾಲ್ಕು ಕಿಲೋದಂತೆ ಅಕ್ಕಿ ಮತ್ತು ಒಂದು ಕಿಲೋದಂತೆ ಗೋಧಿ, ನೀಲಿ ಬಣ್ಣದ ಕಾರ್ಡುದಾರರಲ್ಲಿ ಪ್ರತಿ ಸದಸ್ಯರಿಗೆ ತಲಾ 2 ಕಿಲೋ ಅಕ್ಕಿ ಮತ್ತು ಒಂದು ಕಿಲೋ ಹಿಟ್ಟು ಲಭಿಸುವುದು. ಬಿಳಿ ಬಣ್ಣದ ಕಾರ್ಡುದಾರರಿಗೆ ಅಕ್ಕಿ ಮತ್ತು ಗೋಧಿ ಸಹಿತ ಒಟ್ಟು ಮೂರು ಕಿಲೋ ಧಾನ್ಯ ಮತ್ತು ಒಂದು ಕಿಲೋ ಹೆಚ್ಚು ಹಿಟ್ಟು ಲಭಿಸುವುದೆಂದು ಸಚಿವರು ತಿಳಿಸಿದ್ದಾರೆ.