ಚೆರ್ಕಳ -ಅಡ್ಕಸ್ಥಳ ರಸ್ತೆ ಶೋಚನೀಯ : ಪಳ್ಳತ್ತಡ್ಕದಲ್ಲಿ ಬಿಜೆಪಿಯಿಂದ ರಸ್ತೆ ತಡೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಧಿ ವರದಿ

ಕಾಸರಗೋಡು : ಚೆರ್ಕಳ-ಅಡ್ಕಸ್ಥಳ ರಸ್ತೆ ಶೋಚನೀಯಾವಸ್ಥೆಯಲ್ಲಿದ್ದು, ಪರಿಹಾರ ಕಂಡುಕೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿ ನಡೆಸುತ್ತಿರುವ ರಸ್ತೆ ತಡೆ ಸಪ್ತಾಹದ ಅಂಗವಾಗಿ ಪಳ್ಳತ್ತಡ್ಕದಲ್ಲಿ ರಸ್ತೆ ತಡೆ ನಡೆಯಿತು.

ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ರಸ್ತೆ ತಡೆ ಚಳವಳಿಯ ಅಂಗವಾಗಿ ಪಳ್ಳತ್ತಡ್ಕದಲ್ಲಿ ರಸ್ತೆ ತಡೆಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ ಚಾಲನೆ ನೀಡಿದರು. ಈ ಸಂದರ್ಭ ನೇತರರ ಸಹಿತ ಹಲವಾರ ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.