ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ

`ಕಿರಿಕ್ ಪಾರ್ಟಿ’ಯಿಂದ ಶುರುವಾದ ರಶ್ಮಿಕಾ ಮಂದಣ್ಣಳ ಸಿನಿಜರ್ನಿ ಈಗ ನಾಗಾಲೋಟದಲ್ಲಿದೆ. ಮೊದಲ ಚಿತ್ರದ ಹೀರೋ ರಕ್ಷಿತ್ ಶೆಟ್ಟಿ ಜೊತೆಗೆ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಆಕೆಯ ಬೇಡಿಕೆ ಮಾತ್ರ ಹೆಚ್ಚುತ್ತಲೇ ಇದೆ. ಕನ್ನಡದಲ್ಲಿ ಸ್ಟಾರ್ ನಟರ ಜೊತೆ ರಶ್ಮಿಕಾ ಈಗಾಗಲೇ ಮಿಂಚುತ್ತಿದ್ದಾಳೆ. ಪುನೀತ್ ರಾಜಕುಮಾರ್ ಜೊತೆ `ಅಂಜನಿ ಪುತ್ರ’ ಹಾಗೂ ಗಣೇಶ್ ಜೊತೆ `ಚಮಕ್’ ಚಿತ್ರದಲ್ಲಿ ಆಕೆ ಈಗ ನಟಿಸುತ್ತಿದ್ದಾಳೆ. ಅದಲ್ಲದೇ ಈಗ ಟಾಲಿವುಡ್ ಚಿತ್ರರಂಗದಲ್ಲಿಯೂ ರಶ್ಮಿಕಾ ತನ್ನ ಮಂದಹಾಸದಿಂದ ತೆಲುಗು ಮಂದಿಯನ್ನೂ ಮೋಡಿಮಾಡಲು ಸಜ್ಜಾಗಿದ್ದಾಳೆ.

ರಶ್ಮಿಕಾ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜತೆ `ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ’ ಚಿತ್ರದಲ್ಲಿ ನಟಿಸುತ್ತಿರುವುದು ಈ ಮೊದಲೇ ಫಿಕ್ಸ್ ಆಗಿತ್ತು. ಈಗ ಅಲ್ಲು ಅರ್ಜುನ್ ಜೊತೆ ಇನ್ನೊಂದು ಆತನ ಹೋಮ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ಆಯ್ಕೆಯಾಗಿದ್ದಾಳೆ.   ಅದಲ್ಲದೇ ವಿಜಯ್ ದೇವರಕೊಂಡ ಜತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾಳೆ. ಅಂತೂ ರಶ್ಮಿಕಾ ದಕ್ಷಿಣದಲ್ಲೆಲ್ಲ ತನ್ನ ಕಂಪು ಬೀರುವುದರಲ್ಲಿ ಯಾವ ಅನುಮಾನವೂ ಇಲ್ಲ.