ಅಪರೂಪದ ರಾಜಕಾರಣಿ

ತಮಿಳುನಾಡಿನ ಅಮ್ಮಾ  ಎಂದೇ ಖ್ಯಾತರಾದ ಜಯಲಲಿತಾ ಅಪರೂಪದ ರಾಜಕಾರಣಿ ಎಂದೇ ಸುಳ್ಳಾಗದು. ಏಕೆಂದರೆ ಬಡವರ ಬಗ್ಗೆ ಅಪಾರ ಕಾಳಜಿ ಇರಿಸಿದ ಅಮ್ಮ ಬ್ರಾಂಡ್ ಯಶಸ್ವಿಯಾಗಿತ್ತು. ಅಮ್ಮಾ ಬಾಂಡಿನಲ್ಲೇ ಎಲ್ಲ ಸಾಮಗ್ರಿಗಳು ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಿದ ಕೀರ್ತಿ ಇವರದ್ದು. ಯಾವ ಮುಖ್ಯಮಂತ್ರಿಗಳು ಮಾಡದ ಕೆಲಸವನ್ನು ಮಾಡಿದ ಕರ್ನಾಟಕದ ಮಹಿಳೆ ಇವರು. ಭ್ರಷ್ಟಾಚಾರ ಆಸ್ತಿಪಾಸ್ತಿ ಮಾಡಿ ಹಣ ಮಾಡಿದ್ರೂ ಬಡವರಿಗೆ ಉತ್ತಮ ಕೆಲಸಗಳಿಗೆ ವಿನಿಯೋಗಿಸುತ್ತಿದ್ದರು. ಕರ್ನಾಟಕದ ಜನತೆ ಕಾವೇರಿ ನೀರಿಗಾಗಿ ಜಗಳ ಮಾಡಿ ಕ್ಯಾತೆ ತೆಗೆದಿದ್ದು ಬಿಟ್ಟರೆ ಬೇರೆ ಯಾವುದೇ ದ್ವೇಷ ಇರಲಿಲ್ಲ. ಅದೂ ಅಲ್ಲಿಯ ಜನರ ಬೆಳೆಗಾಗಿ ಮಾತ್ರ ಒಬ್ಬ ಮಹಿಳೆ ಈ ರೀತಿ ಹಲವಾರು ವರ್ಷಗಳಿಂದ ರಾಜ್ಯಕ್ಕಾಗಿ ದುಡಿದ ಇವರ ಸಾಧನೆ ಬಹು ದೊಡ್ಡದು. ಇಂಥವರು ಇನ್ನು ಹುಟ್ಟಿ ಬರಲಿಕ್ಕೆ ಇಲ್ಲ.

  • ಎಸ್ ಮಹಾಲಿಂಗ, ಪುತ್ತೂರು