500 ಬಾಲೆಯರ ಅತ್ಯಾಚಾರಿ 13 ವರ್ಷ ಬಳಿಕ ಸಿಕ್ಕಿಬಿದ್ದ !

ದೆಹಲಿ : 500 ಬಾಲಕಿಯರನ್ನು ಅತ್ಯಾಚಾರಗೈದ ಸರಣಿ ಅತ್ಯಾಚಾರಿ ಕೊನೆಗೂ ಬರೋಬ್ಬರಿ 13 ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 38 ವರ್ಷದ ಸುನಿಲ್ ರಾಷ್ಟೋಗಿ ಈ ಸರಣಿ ಅತ್ಯಾಚಾರಿ.

ಅಂದಹಾಗೆ  ಆತ ತನ್ನ ಈ ದುಷ್ಟ ಕೆಲಸಕ್ಕೂ ದಿನ, ಗಳಿಕೆ, ಮುಹೂರ್ತ, ಬಣ್ಣ ಇತ್ಯಾದಿ ಮೂಢನಂಬಿಕೆಗಳನ್ನು ಶಿರಸಾ ಪಾಲಿಸುತ್ತಿದ್ದ. ಆತ  ದೆಹಲಿಗೆ ಬರಲು ಬಳಸುತ್ತಿದ್ದ ರೈಲು ಸಂಪರ್ಕ್ ಕ್ರಾಂತಿ ಎಕ್ಸ್‍ಪ್ರೆಸ್ ಮಾತ್ರ, ಬೇರೆ ಯಾವುದರಲ್ಲೂ ಬರುತ್ತಿರಲಿಲ್ಲ.  ಕೇವಲ ಬೆಸ ದಿನಾಂಕಗಳಲ್ಲಿ ಮಾತ್ರ ಬರುತ್ತಿದ್ದ. ಇದರ ಜೊತೆಗೆ ಆತ ಧರಿಸುತ್ತಿದ್ದ  ಉಡುಪು ಕೂಡ ಕೆಂಪು ಜಾಕೆಟ್ ಮತ್ತು ನೀಲಿ ಜೀನ್ಸ್. ಇವುಗಳು ಆತನಿಗೆ  ಲಕ್ಕಿ ಅಂತೆ. ದೆಹಲಿ ಆತನ ಬೇಟೆಗೆ ಸುಸೂತ್ರವಾದ ಜಾಗವಂತೆ. 7 ರಿಂದ 11 ವರ್ಷದ ಬಾಲಕಿಯರು ಅತಿ ಸುಲಭದಲ್ಲಿ ಆತನ ಬಲೆಗೆ ಬೀಳುತ್ತಾರೆ. ಈ ಬಾಲಕಿಯರನ್ನು ಬಳಸಿದ ಬಳಿಕ ಸುರಕ್ಷಿತವಾಗಿ ಮನೆಗೆ ಹಿಂತಿರುಗಿಸುವ ಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದ. ಇದು ಆತನ ಇಂದು ನಿನ್ನೆಯ ಚಾಳಿಯಲ್ಲ. ಬರೋಬ್ಬರಿ 13 ವರ್ಷಗಳಿಂದ ಸುಮಾರು 500 ಬಾಲಕಿಯರ ರುಚಿ ನೋಡಿದ್ದಾನೆ.

ಅಂದಹಾಗೆ ಈ ಕಾಮುಕ  ವೃತ್ತಿಯಲ್ಲಿ ಟೈಲರ್. ಉತ್ತರ ಪ್ರದೇಶದ ರಾಂಪುರ ನಿವಾಸಿ. ಸದ್ಯ ಆತನ ಲಕ್ಕಿಗಳೆಲ್ಲ ಅನ್ ಲಕ್ಕಿಗಳಾಗಿ ದೆಹಲಿಯ ಕಲ್ಯಾಣಪುರಿ ಪೊಲೀಸರ ಅತಿಥಿಯಾಗಿದ್ದಾನೆ.

ನ್ಯೂ ಅಶೋಕನಗರದ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮತ್ತು ಇನ್ನೊಬ್ಬಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ತನಿಖೆಯ ವೇಳೆ ಪ್ರಾರಂಭದಲ್ಲಿ ಆತ 13 ಬಾಲಕಿಯರನ್ನು ಅತ್ಯಾಚಾರ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಆದರೆ ಕ್ರಮೇಣ ತನಿಖೆ ಮುಂದುವರಿದಂತೆ ಈ ರಸಿಕ ಸಿಖಾಮಣಿಯ ಅತ್ಯಾಚಾರದ ಸಂಖ್ಯೆ 500ಕ್ಕೇರಿತು.

ಈ ನೀಚ ಮಕ್ಕಳ ಬೇಟೆಯನ್ನು ಮಧ್ಯಾಹ್ನ 2 ರಿಂದ 4 ಗಂಟೆಯ ಅವಧಿಯಲ್ಲಿ ನಡೆಸುತ್ತಿದ್ದ. ಶಾಲೆ ಬಿಡುತ್ತಿದ್ದ ಬಾಲಕಿಯರ ತಂಡವನ್ನು ಹಿಂಬಾಲಿಸುತ್ತಿದ್ದ. ತಂಡದಲ್ಲಿ ಬಾಲಕಿ ಏಕಾಂಗಿಯಾಗುವುದಕ್ಕೆ ಕಾಯುತ್ತಿದ್ದ. ಬಳಿಕ ಬಾಲಕಿಯಲ್ಲಿ ತಂದೆಯ ಗೆಳೆಯ ಎಂದು ಪರಿಚಯಿಸಿ, ಬಟ್ಟೆ, ತಿಂಡಿ, ಆಟಿಕೆಗಳ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಆತನಿಂದ ಕಿರುಕುಳಕ್ಕೆ ಒಳಗಾದ ಬಾಲಕಿಯರು ಈ ಮಾಹಿತಿ ನೀಡಿದ್ದಾರೆ.