ಅತ್ಯಾಚಾರಿಗೆ 7 ವರ್ಷ ಜೈಲು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಅತ್ಯಾಚಾರಿಗೆ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಲವಂತಿಗೆ ಗ್ರಾಮದ ಕೆರೆಕೋಡಿ ನಿವಾಸಿ ಪ್ರವೀಣ್ (29) ಎಂಬಾತ 2015ರಲ್ಲಿ ಕಿಲ್ಲೂರು ನದಿ ದಡದಲ್ಲಿ ಎಸಗಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ

ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಸೆಷನ್ ನ್ಯಾಯಾಲಯ ಕಲಂ 376, 417 ಐಪಿಸಿ ಪ್ರಕಾರ ಏಳು ವರ್ಷಗಳ ಜೈಲು ಶಿಕ್ಷೆ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ನಾಗೇಶ್ ಎಂಬಾತನ ವಿಚಾರಣೆ ಮುಂದುವರಿಯುತ್ತಿದ್ದು, ಪ್ರವೀಣ್ ಕಲ್ಲಡ್ಕದಲ್ಲಿ ನಡೆದ ಇನ್ನೊಂದು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದು, ಆ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ.