ಅಪ್ರಾಪ್ತೆ ಮಾನಭಂಗ ಯತ್ನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಯುವಕ 12 ವರ್ಷದ  ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟ ಎಂಬಲ್ಲಿ ಗುರುವಾರ ನಡೆದಿದೆ.

ಬಾಲಕಿಯ ಹೆತ್ತವರು ಗುರುವಾರ ಮಧ್ಯಾಹ್ನ ಔಷಧಿಗೆಂದು ಮೂಡುಬಿದಿರೆಗೆ ಹೋದ ಸಂದರ್ಭವನ್ನು ನೋಡಿದ ಸ್ಥಳೀಯ ಆರೋಪಿ ಸದಾಶಿವ ಎಂಬಾತ ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಬಾಲಕಿಯ ಕೈ ಹಿಡಿದೆಳೆದು ಮಾನಭಂಗಕ್ಕೆತ್ನಿಸಿದ್ದು, ಬಾಲಕಿ ತಪ್ಪಿಸಿಕೊಂಡು ಬೊಬ್ಬೆ ಹೊಡೆದಾಗ ಆರೋಪಿ ಪರಾರಿಯಾದ ಎನ್ನಲಾಗಿದೆ.

ಆರೋಪಿ ತಲೆಮರೆಸಿಕೊಂಡಿದ್ದು ಮೂಡುಬಿದಿರೆ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮೂಡುಬಿದಿರೆ ಪೇಟೆಯ ದಿನವಹಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.