ಅತ್ಯಾಚಾರಕ್ಕೆ ವಿಫಲ ಯತ್ನ : ಬಾಲಕಿಗೆ ವಿಷ ಕುಡಿಸಿದರು

ಸಾಂದರ್ಭಿಕ ಚಿತ್ರ

ಪಿಲಿಭಿತ್ (ಉ ಪ್ರ) : ತನ್ನ ಮನೆಯ ಹಟ್ಟಿಯಲ್ಲಿದ್ದ 17 ವರ್ಷದ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಲು ವಿಫಲ ಯತ್ನ ನಡೆಸಿದ ಬಳಿಕ ಆಕೆಗೆ ಬಲವಂತವಾಗಿ ಕೀಟನಾಶಕ ಕುಡಿಸಿದ ಘಟನೆಯೊಂದು ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.  ಈ ವೇಳೆ ಬಾಲಕಿಯ ತಂದೆ ಮನೆಯಲ್ಲಿ ಇರಲಿಲ್ಲ. “ಹಟ್ಟಿಯೊಳಗೆ ನುಗ್ಗಿದ ಮೂವರು ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿದ್ದು, ಆಕೆ ಬೊಬ್ಬೆ ಹಾಕಿದಾಗ ಒಬ್ಬಾತ ಕೀಟನಾಶಕ ಕುಡಿಸಿದ್ದಾನೆ” ಎಂದು ತಂದೆ ದೂರಿನಲ್ಲಿ ಹೇಳಿದ್ದಾರೆ.