ರಣವೀರನಿಗೆ ಥಮ್ಸ್ ಅಪ್

ಸಂಜಯ್ ಲೀಲಾ ಬನ್ಸಾಲಿಯವರ `ಪದ್ಮಾವತಿ’ ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ 1 ಕೋಟಿಗಿಂತಲೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದು ಈಗ ವೀಕ್ಷಕರ ಸಂಖ್ಯೆ 2 ಕೋಟಿ ಸಮೀಪಿಸುತ್ತಿದೆ. ಇದರಲ್ಲಿಯ ದೃಶ್ಯ ವೈಭವದ ಜೊತೆಗೆ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಹಾಗೂ ಶಾಹೀದ್ ಕಪೂರ್ ರಾಜನಾಗಿದ್ದರೂ ಟ್ರೈಲರಿನಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆದಿದ್ದು ವಿಲನ್ ಅಲ್ಲಾವುದ್ದೀನ್ ಖಿಲ್ಜಿ!

ಖಳನಾಯಕನಾಗಿ ಮೊದಲ ಬಾರಿಗೆ ನಟಿಸಿರುವ ರಣವೀರ್ ಸಿಂಗ್ ಲುಕ್, ಆತನ ಬಾಡಿ ಲಾಂಗ್ವೇಜಿಗೆ ಸಿನಿರಸಿಕರು ಥಮ್ಸ್ ಅಪ್ ಹೇಳಿದ್ದಾರೆ. ಖಿಲ್ಜಿಯ ಪ್ರತಿಯೊಂದು ಎಂಟ್ರಿಯೂ ಮೈನವಿರೇಳುವಂತಿದೆ ಎನ್ನುವ ಪ್ರತಿಕ್ರಿಯೆಯೂ ಪ್ರೇಕ್ಷಕರಿಂದ ಬಂದಿದೆ. ಈ ರೀತಿಯ ಸಿನಿರಸಿಕರ ಅಭೂತಪೂರ್ವ ಪ್ರತಿಕ್ರಿಯೆಗೆ ರಣವೀರ್ ಇಮೋಶನಲ್ ಆಗಿ ಕಣ್ಣೀರುಗರೆದಿದ್ದಾನೆ. ರಣವೀರ್ ಈ ಪಾತ್ರದಲ್ಲಿ ಅದೆಷ್ಟು ಮುಳುಗಿಹೋಗಿದ್ದ ಎಂದರೆ ಆತನ ಮಾನಸಿಕ ಸ್ಥಿತಿ ಮೊದಲಿನಂತಾಗಲು ಆತ ಮನೋವೈದ್ಯರನ್ನೂ ಭೇಟಿಯಾಗುತ್ತಿದ್ದಾನೆ ಎನ್ನಲಾಗಿದೆ.

ಚಿತ್ರ `ಬಾಹುಬಲಿ’ಯ ರೀತಿಯಲ್ಲಿಯೇ ವೈಭವೋಪೇತವಾಗಿ ಮೂಡಿಬಂದಿದ್ದು ಈ ಸಿನಿಮಾವೂ ಅದೇ ರೀತಿ ಬ್ಲಾಕ್ ಬಸ್ಟರ್ ಸಿನಿಮಾ ಆಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.