ರಣವೀರ್ ಅರ್ಜುನಗೆ `ಬೆಟರ್ ಹಾಫ್’ ಆಗ್ತಾನಂತೆ

ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ಫ್ರೆಂಡ್ಶಿಪ್ ಬಗ್ಗೆ ಆಗೀಗ ಕೇಳುತ್ತಲೇ ಇರುತ್ತೇವೆ. ಈ `ಗುಂಡೇ’ ಬಾಲಿವುಡ್ಡಿನ ಲೇಟೆಸ್ಟ್ `ಜೈ-ವೀರು’ ಎಂತಲೇ ಫೇಮಸ್. ಈಗ ರಣವೀರ್-ಅರ್ಜುನ್ ತಮಾಷೆಯ ಟ್ವಿಟ್ಟರ್ ಸಂಭಾಷಣೆಯೊಂದು ವೈರಲ್ ಆಗಿದೆ.

ಮೊನ್ನೆ ಅರ್ಜುನ್ ಕಪೂರನ `ಹಾಫ್ ಗರ್ಲ್‍ಫ್ರೆಂಡ್’ ಟ್ರೈಲರ್ ನೋಡಿ ರಣವೀರ್ ಅದರಲ್ಲಿ ಅರ್ಜುನ್ ನೋವಿಗೆ ಸ್ಪಂದಿಸಿದ್ದು ಹೀಗೆ …“ನೀನು ಅಳುವುದು ನೋಡಿ ನನಗೂ ಅಳು ಬರುತ್ತೆ. ಆಕೆ ನಿನಗೆ `ಹಾಫ್’ ಆದರೆ ನಾನು ನಿನಗೆ ಉಳಿದ `ಹಾಫ್’ ಆಗುವೆ ಅದೂ `ಬೆಟರ್ ಹಾಫ್’. ಆಳುವುದೊಂದು ಮಾಡ್ಬೇಡ ಅಷ್ಟೇ” ಎಂದು ಟ್ವೀಟಿಸಿದ್ದಾನೆ. ಅದಕ್ಕೆ ಅರ್ಜುನ್ ಕೂಡಾ ಪ್ರತಿಕ್ರಿಯಿಸಿ “ನೀನು ಯಾವಾಗಲೂ ನನ್ನ ಫುಲ್ ಆಂಡ್ ಫೈನಲ್” ಎಂದು ಅದೇ ತಮಾಷೆಯ ದಾಟಿಯಲ್ಲಿ ಬರೆದಿದ್ದಾನೆ.

ರಣವೀರ್ ಸಂದರ್ಶನವೊಂದರಲ್ಲಿ ತನ್ನ ಮತ್ತು ಅರ್ಜುನ್ ಸ್ನೇಹದ ಬಗ್ಗೆ ಹೇಳಿಕೊಂಡಿದ್ದಾನೆ “ನಾವು ಸಾಮಾನ್ಯವಾಗಿ ದಿನಾ ಮೆಸೇಜ್ ಮಾಡಿಕೊಳ್ಳುತ್ತಿರುತ್ತೇವೆ. ನಮ್ಮಿಬ್ಬರಲ್ಲಿ ತುಂಬಾ ಸಾಮ್ಯತೆ ಇರುವುದರಿಂದ ನಮಗೆ ಮಾತಾಡುವಾಗ ವಿಷಯವೇ ಬರಿದಾಗುವುದಿಲ್ಲ. ಅರ್ಜುನ್ ಒಬ್ಬ ಇಂಟೆಲಿಜೆಂಟ್, ಫನ್ನಿ ಪರ್ಸನ್. ಅವನ ಜೊತೆ ಹ್ಯಾಂಗೌಟ್ ಮಾಡುವುದು ನನಗಿಷ್ಟ. ನಮ್ಮಿಬ್ಬರದು ಪಾಮಾಣಿಕ ಸ್ನೇಹವಾದ್ದರಿಂದ ಜನರೂ ನಮ್ಮ ಜೋಡಿಯನ್ನು ಇಷ್ಟಪಡುತ್ತಾರೆ” ಎಂದಿದ್ದಾನೆ.