ರಣವೀರ್-ದೀಪಿಕಾ ದೂರವಾಗಿಲ್ಲ

ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಬಿರುಕು ಮೂಡಿದೆ ಎಂಬ ರೂಮರ್ ಕೆಲವು ದಿನಗಳಿಂದ ಬಾಲಿವುಡ್ಡಿನಲ್ಲಿ ಗಿರಕಿ ಹೊಡೆಯುತ್ತಿತ್ತು. ಆ ಸುದ್ದಿಗೀಗ ಅವರೇ ಸ್ವತಃ ತೆರೆ ಎಳೆದಿದ್ದಾರೆ.

ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಏರ್ಪಡಿಸಿದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಿ ಕೈ ಕೈ ಹಿಡಿದು ಮರಳುತ್ತಿರುವ ಅವರ ಫೋಟೋ ಈಗ ವೈರಲ್ ಆಗಿದೆ. ಇದರಿಂದ ಅವರಿಬ್ಬರೂ ಇನ್ನೂ ಪ್ರೇಮಿಗಳೇ ಎನ್ನುವುದು ಸಾಬೀತಾಗಿದೆ.

ತನ್ನ `ಬೇಫಿಕರ್’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಇಬ್ಬರ ಪ್ರೇಮ ಸಂಬಂಧದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ರಣವೀರ್ ಮಧ್ಯದಲ್ಲೇ ಎದ್ದು ಹೋಗಿದ್ದು, ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿಗೆ ಕಾರಣವಾಗಿತ್ತು. ಅದೂ ಅಲ್ಲದೇ ದೀಪಿಕಾ `ಪದ್ಮಾವತಿ’ ಚಿತ್ರಕ್ಕಾಗಿ ಶಾಹೀದ್ ಕಪೂರ್ ಬಗ್ಗೆ ಬ್ಯಾಟಿಂಗ್ ಮಾಡಿದ್ದು ರಣವೀರಗೆ ಅಸಮಾಧಾನವಾಗಿದ್ದು ಇದರಿಂದಾಗಿ ರಣವೀರ್-ದೀಪಿಕಾ ಸಂಬಂಧ ಕೆಟ್ಟಿದೆ ಎಂದೂ ಹೇಳಲಾಗಿತ್ತು. ಆದರೆ ಈ ಫೆÇೀಟೋ ನೋಡಿದ ಮೇಲೆ ಈ ಸುದ್ದಿ ಬರೀ ರೂಮರ್ ಮಾತ್ರ ಎನ್ನುವುದು ಸಾಬೀತಾಗಿದೆ.