ಮಂಗಳೂರಿನಲ್ಲಿ ಸುಲಿಗೆ ಮಾಡುವ ಹೋಟೆಲುಗಳು

ಇತ್ತೀಚೆಗೆ ಮಂಗಳೂರಿಗೆ ಹೋದಾಗ  ಊಟಕ್ಕಾಗಿ ಹೋಟೆಲಿಗೆ ಕಾಲಿಟ್ಟಾಗ ಪಕ್ಕನೆ ಕಣ್ಣು ದರ ಪಟ್ಟಿಗೆ ವಾಲೀತು ಅದನ್ನು ನೋಡಿ ತಲೆ ತಿರುಗಲಾರಂಭಿಸಿತು ಎಲ್ಲ ದರ ಏರಿಕೆ ಅದರಲ್ಲೂ ಮಸಾಲೆ ದೋಸೆ ದರ ನೋಡಿ ಈ ದೋಸೆಗಿಂತ ಊಟ ಮಾಡುವುದೇ ಒಳ್ಳೆಯದು ಎನಿಸಿತು ಏಕೆಂದರೆ ಊಟಕ್ಕಿಂತ ಜಾಸ್ತಿ ಈ ಮಸಾಲೆ ದೋಸೆ ತರ ಇತ್ತು ಹೋಟೆಲಿನವರು ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಆದಷ್ಟು ಹಣ ಬಾಚುವುದೇ ಗುರಿಯಾಗಿಸಿದ್ದಾರೆ ಎಲ್ಲದಕ್ಕೂ ಈಗ ಜಿಎಸ್ಟಿ ಅಂತ ಮುಂಡಾ ಮೋಚುತ್ತಿದ್ದಾರೆ ಎಚ್ಚರ  ಮಂಗಳೂರಿಗೆ ಹೋದಾಗ ಜಿಲ್ಲಾಡಳಿತ ಇಂತಹ ಹೋಟೆಲಿನ ಮೇಲೆ ಹದ್ದಿನ ಕಣ್ಣಿಡಲಿ

  • ಚಿಂತನ್  ಪುತ್ತೂರು