ಮತ್ತೆ ಜೊತೆಯಾಗುತ್ತಿರುವ ರಣಬೀರ್-ಸೋನಂ

ಹತ್ತು ವರ್ಷಗಳ ನಂತರ ಬಾಲಿವುಡ್ಡಿನ `ರಾಕ್ ಸ್ಟಾರ್’ ರಣಬೀರ್ ಕಪೂರ್ ಮತ್ತು ಬಿಟೌನ್ ಸ್ಟೈಲಿಷ್ಟ್ ಸೋನಂ ಕಪೂರ್ ತೆರೆಯ ಮೇಲೆ ಒಂದಾಗುತ್ತಿದ್ದಾರೆ. 2007ರಲ್ಲಿ ತೆರೆಕಂಡ ಬನ್ಸಾಲಿಯ `ಸಾವರಿಯಾ’ ಸಿನಿಮಾದ ನಂತರ ಅವರು ಮತ್ತೆ ಜೊತೆಯಾಗಿ ನಟಿಸಿರಲಿಲ್ಲ. ಇದೀಗ ಸಂಜಯ್ ದತ್ ಜೀವನಾಧರಿತ ಚಿತ್ರದಲ್ಲಿ ಮತ್ತೆ ಜೊತೆಯಾಗುತ್ತಿದ್ದಾರೆ. ಈ ಚಿತ್ರವನ್ನು ರಾಜಕುಮಾರ್ ಹಿರಾನಿ ನಿರ್ದೇಶಿಸಲಿದ್ದಾರೆ.

`ಸಾವರಿಯಾ’ ಚಿತ್ರ ರಣಬೀರ್ ಮತ್ತು ಸೋನಂ ಇಬ್ಬರಿಗೂ ಮೊದಲ ಚಿತ್ರವಾಗಿತ್ತು. ಆ ಸಮಯದಲ್ಲಿ ಅವರ ನಡುವೆ ಬರೀ ಸ್ನೇಹ ಮಾತ್ರವಲ್ಲದೇ ಇಬ್ಬರ ನಡುವೆ ಪ್ರೀತಿಯೂ ಚಿಗುರಿತ್ತು ಎನ್ನುವ ರೂಮರ್ ಇತ್ತು. ತದ ನಂತರ ಅವರಿಬ್ಬರ ದಾರಿಯೂ ಬೇರೆ ಬೇರೆಯಾಯಿತು ಅಷ್ಟೇ ಅಲ್ಲ ಅವರ ನಡುವೆ ಕನಿಷ್ಟ ಗೆಳೆತನವೂ ಇರಲಿಲ್ಲ.

ಕೆಲವು ದಿನಗಳ ಹಿಂದೆ ರಣಬೀರ್ ತನ್ನ `ಏ ದಿಲ್ ಹೇ ಮುಶ್ಕಿಲ್’ ಸಿನಿಮಾದ ಸಕ್ಸಸ್ ಪಾರ್ಟಿ ನೀಡಿದ್ದು ಆ ಪಾರ್ಟಿಗೆ ಸೋನಂಳನ್ನೂ ಆಮಂತ್ರಿಸಿದ್ದ. ಅವರಿಬ್ಬರೂ ಈಗ ತಮ್ಮ ನಡುವಿನ ಹಳೆಯದನ್ನೆಲ್ಲ ಮರೆತು ಮುಂಬರುವ ಚಿತ್ರಕ್ಕಾಗಿ ಮತ್ತೆ ಸ್ನೇಹದಿಂದರಲು ಬಯಸಿದ್ದಾರೆ ಎನ್ನಲಾಗಿದೆ.