ರಣಬೀರ್-ಆಲಿಯಾ ಡೇಟಿಂಗ್

ಬಾಲಿವುಡ್ಡಿನಲ್ಲಿ ಯಾರು ಯಾವಾಗ ಜೊತೆಯಾಗುತ್ತಾರೆ ಎಂದು ಹೇಳುವುದೇ ಕಷ್ಟ. ಕೆಲವು ಜೋಡಿಗಳ ರಿಲೇಶನ್ಶಿಪ್ ಒಂದು ಸಿನಿಮಾ ಶೂಟಿಂಗ್ ಮುಗಿಯುವವರೆಗೆ ಮಾತ್ರ ಸೀಮಿತವಾಗಿದ್ದರೆ ಇನ್ನು ಕೆಲವರದ್ದು ಮಾತ್ರ ಮತ್ತೆಯೂ ಮುಂದುವರಿಯುತ್ತದೆ. ಮದುವೆಯವರೆಗೆ ಆ ಸಂಬಂಧವನ್ನು ಕೊಂಡು ಹೋಗುವ ಜೋಡಿ ಬಹಳ ವಿರಳ. ಇದೀಗ ರಣಬೀರ್ ಕಪೂರ್ ಹಾಗೂ ಆಲಿಯಾ ಬಾಲಿವುಡ್ಡಿನ ಹೊಸ ಲವ್ ಬಡ್ರ್ಸ್ ಆಗಿದ್ದಾರೆ. ಇವರಿಬ್ಬರೂ ಆಯಾನ್ ಮುಖರ್ಜಿಯ `ಬ್ರಹ್ಮಾಸ್ತ್ರ’ ಎನ್ನುವ ಚಿತ್ರದಲ್ಲಿ ಜೊತೆಯಾಗುತ್ತಿದ್ದು ಇದೀಗ ಕೆಲವು ತಿಂಗಳಿಂದ ಎಲ್ಲೆಡೆ ಜೊತೆಯಾಗಿಯೇ ತಿರುಗುತ್ತಿದ್ದಾರೆ.

ಕತ್ರೀನಾ ಕೈಫ್ ಜೊತೆ ಬ್ರೇಕಪ್ ಮಾಡಿಕೊಂಡ ನಂತರ ರಣಬೀರ್ ಹೆಸರು ಕೆಲವು ಸಮಯ ಮಹಿರಾ ಖಾನ್ ಜೊತೆ ಕೇಳಿಬಂದಿತ್ತು. ಈ ನಡುವೆ ಅವರಿಬ್ಬರೂ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಈ ಕಡೆ ಆಲಿಯಾ ಕೂಡಾ ಸಿದ್ಧಾರ್ಥ್ ಮಲ್ಹೋತ್ರನಿಂದ ದೂರವಾಗಿದ್ದಾಳೆ. ಸಿದ್ ಹಾಗೂ ಜಾಕ್ಲಿನ್ ಫೆರ್ನಾಂಡಿಸ್ ಕ್ಲೋಸ್ನೆಸ್ ಆಲಿಯಾಳನ್ನು ಆತನಿಂದ ದೂರಮಾಡಿತ್ತು. ಹಾಗಾಗಿ ರಣಬೀರ್ ಹಾಗೂ ಆಲಿಯಾ ಇಬ್ಬರೂ ಸಿಂಗಲ್ ಆಗಿದ್ದವರು ಈಗ ಮಿಂಗಲ್ ಆಗಿದ್ದಾರೆ. ಆಲಿಯಾ-ರಣಬೀರ್ ಹೊಸ ವರ್ಷವನ್ನೂ ಜೊತೆಯಾಗಿ ಕಳೆದಿದ್ದಾರೆ. `ಪದ್ಮಾವತ್’ ಚಿತ್ರದ ಸ್ಕ್ರೀನಿಂಗಿಗೂ ಇಬ್ಬರೂ ಒಟ್ಟಾಗಿಯೇ ಬಂದಿದ್ದರು. ಅದಲ್ಲದೇ ಈ ನಡುವೆ ಒಬ್ಬರು ಇನ್ನೊಬ್ಬರ ಅಪಾಟ್ರ್ಮೆಂಟಿಗೆ ಹೋಗಿ ಕ್ವಾಲಿಟಿ ಟೈಮ್ ಕಳೆಯುವುದು ಮಾಮೂಲಿಯಾಗಿಬಿಟ್ಟಿದೆ.

ಆಲಿಯಾಗೆ ಮೊದಲಿನಿಂದಲೂ ರಣಬೀರ್ ಮೇಲೆ ಕ್ರಶ್ ಇತ್ತು. ಎರಡು ವರ್ಷಗಳ ಹಿಂದೆ ಟಾಕ್ ಶೋವೊಂದರಲ್ಲಿ ರಣಬೀರನನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದಳು. ಕೊನೆಗೆ `ನಾನು ಆತನ ದೊಡ್ಡ ಅಭಿಮಾನಿಯಷ್ಟೇ’ ಎಂದಿದ್ದು ಬೇರೆ ಮಾತು. ಇನ್ನು ರಣಬೀರ್ ಕೂಡಾ ಹಲವು ಬಾರಿ ಆಲಿಯಾಳನ್ನು ಹೊಗಳಿದ್ದ. ಅದಲ್ಲದೇ ರಣಬೀರ್-ಆಲಿಯಾ ಜೊತೆಯಿದ್ದಾಗ ಅವರು ಪ್ರೇಮದಿಂದ ನೋಡಿಕೊಳ್ಳುವ ಪರಿಯಂತೂ ಅವರಿಬ್ಬರೂ ಈಗ ಲವ್ವಲ್ಲಿ ಬಿದ್ದಿದ್ದಾರೆ ಎಂದು ಯಾರೂ ಬೇಕಾದರೂ ಹೇಳಬಹುದಾಗಿದೆ. ಅವರಿಬ್ಬರ ಸಂಬಂಧದ ಕುರಿತು ಈಗ ಬಾಲಿವುಡ್ ಸೆಲೆಬ್ರಿಟಿಗಳೂ ಮಾತಾಡುತ್ತಿದ್ದಾರೆ. ಮೊನ್ನೆ ಟಾಕ್ ಶೋವೊಂದರಲ್ಲಿ ಬಿಟೌನ್ ಡ್ರೆಸ್ ಡಿಸೈನರ್ ಮನೀಶ್ ಮಲ್ಹೋತ್ರಾ “ಈ ವರ್ಷ ರಣಬೀರ್-ಆಲಿಯಾ ಹುಕಪ್ ಆಗ್ತಾ ಇದ್ದಾರೆ” ಎಂದು ಹೇಳಿ ಅವರೀಗ ಡೇಟಿಂಗ್ ಮಾಡುತ್ತಿರುವುದನ್ನು ಕನ್ಫರ್ಮ್ ಮಾಡಿದ್ದಾರೆ.

 

 

LEAVE A REPLY