ಪೊಲೀಸ್ ಗಂಡೇಟಿಗೆ ದಲಿತ ಬಲಿ : ರಾಮನಾಥಪುರಂನಲ್ಲಿ ಉದ್ವಿಗ್ನ ಸ್ಥಿತಿ

ಚೆನ್ನೈ : ತಮಿಳುನಾಡಿನ ರಾಮನಾಥಪುರಂನಲ್ಲಿ ಪೊಲೀಸರು ದಲಿತ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಸಾಯಿಸಿದ ಬಳಿಕ, ಆ ಪ್ರದೇಶದಲ್ಲಿ ಭಾರೀ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮೃತ ಗೋವಿಂದನ್ (46) ವಿರುದ್ಧ ಹಲವು ಪ್ರಕರಣಗಳಿದ್ದು, ಈತ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದಾಗ ಪೊಲೀಸರು ಸ್ವ-ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆಂದು ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ಆತನ ಸಂಬಂಧಿಕರು ಅಲ್ಲಗಳೆದಿದ್ದಾರೆ. ಅಂಬೇಡ್ಕರ್ ಜಯಂತಿಯಾದ ನಿನ್ನೆ ಇಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಮಮಾನವೆಸಗಿದ ಘಟನೆಯಿಂದ ಗಲಭೆ ಸೃಷ್ಟಿಯಾಗಿದೆ ಎಂದು ಪೊಲೀಸರು ಹೇಳಿದರು.