`ಸಿಬಿಐ ಮಾತ್ರ ಅಪರಾಧಿಗಳ ಪತ್ತೆ ಹಚ್ಚಬಲ್ಲದು ಎನ್ನುವುದು ಮಿಥ್ಯೆ’

ಆರ್ ರಾಮಲಿಂಗ ರೆಡ್ಡಿ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿ 48 ಗಂಟೆಗಳಾಗುವ ಮೊದಲೇ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಿಗೊಳಿಸಿದೆ. ಈ ನಿಟ್ಟಿನಲ್ಲಿ ಅವರ ಸಂದರ್ಶನ.

 • ಸಾರಿಗೆ ಸಚಿವರಾಗಿ ನೀವು ಉತ್ತಮ ಕೆಲಸವನ್ನೇ ನಿರ್ವಹಿಸಿದ್ದೀರಿ. ಖಾತೆ ಬದಲಾವಣೆಗೆ ಬೇಸರವಾಗಿದೆಯೆ ?

ಇಲ್ಲ. ಇದು ಸಾಮಾನ್ಯ ವಿಷಯ. ಇದರಲ್ಲೇನೂ ಅಸಹಜತೆಯಿಲ್ಲ.

 • ಮುಖ್ಯಮಂತ್ರಿ ನಿಮ್ಮ ಜೊತೆಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡರೆ ?

ವಾರದ ಮೊದಲು ಅವರು ನನಗೆ ಈ ಬಗ್ಗೆ ತಿಳಿಸಿದರು. ನಾನು ಯಾವುದೇ ಖಾತೆಯನ್ನೂ ಕೇಳಿಲ್ಲ. 1994ರಿಂದ ನಾನು ಹೀಗೇ ಇದ್ದೆ. ಮುಖ್ಯಮಂತ್ರಿ ಕೊಟ್ಟಿರುವುದನ್ನು ತೆಗೆದುಕೊಂಡಿರುವೆ.

 • ನೀವು ಸಾರಿಗೆ ಸಚಿವರಾಗಿ ಮಾಡಿದ ಉತ್ತಮ ಕೆಲಸಗಳ ಶ್ರೇಯಸ್ಸು ಮತ್ತೊಬ್ಬರಿಗೆ ಹೋಗಲಿದೆ ಎಂದು ಬೇಸರವೆ ?

ಇಲ್ಲ. ನನಗೇಕೆ ಬೇಸರವಾಗಲಿದೆ ? ರಾಮಲಿಂಗ ರೆಡ್ಡಿ ಒಬ್ಬ ವ್ಯಕ್ತಿಯಾಗಿ ಕಾಂಗ್ರೆಸ್ ಪಕ್ಷದ ನೆರವಿಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ನನಗೆ ಅವಕಾಶ ಕೊಟ್ಟಿದೆ. ಹೀಗಾಗಿ ಶ್ರೇಯಸ್ಸು ಕಾಂಗ್ರೆಸ್ಸಿಗೆ ಹೋಗಬೇಕಿದೆ. ನನಗಲ್ಲ.

 •  ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸುವ ಅಧಿಕಾರ ಮುಖ್ಯಮಂತ್ರಿ ಕೈಲಿದೆ. ಹಾಗಿದ್ದರೆ ಗೃಹಸಚಿವರು ಕೆಲಸ ಮಾಡುವುದು ಹೇಗೆ ?

ಎಲ್ಲಾ ಇಲಾಖೆಗಳಲ್ಲೂ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಅಧಿಕಾರ ಮುಖ್ಯಮಂತ್ರಿ ಕೈಯಲ್ಲೇ ಇದೆ. ಉದಾಹರಣೆಗೆ ನನ್ನ ಸಾರಿಗೆ ಇಲಾಖೆ ಅಡಿ ಇದ್ದ ಕೆಎಸ್ಸಾರ್ಟಿಸಿಯಲ್ಲಿ ನಾಲ್ವರಿಂದ ಐವರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿದ್ದರು. ಒಮ್ಮೆ ಅವರನ್ನು ನೇಮಿಸಿದ ನಂತರ ಅವರು ಸಚಿವರಿಂದಲೇ ಆದೇಶ ಸ್ವೀಕರಿಸಬೇಕು.

 • ಆದರೆ ಅಧಿಕಾರಿಗಳು ವರ್ಗಾವಣೆ ಮತ್ತು ಉತ್ತಮ ಸ್ಥಾನದ ಮೇಲೇ ಕಣ್ಣಿಟ್ಟಿರುತ್ತಾರೆ. ಹೀಗಿರುವಾಗ ಜನರ ಸುರಕ್ಷೆಯ ಬಗ್ಗೆ ಗಮನಹರಿಸಲು ಸಾಧ್ಯವೆ ?

ನಗರದಲ್ಲಿ ಬಹಳಷ್ಟು ಪೊಲೀಸ್ ಠಾಣೆಗಳಿವೆ. ಅಲ್ಲಿ ವಿವಿದ ಸ್ತರದಲ್ಲಿ ಹಲವು ಅಧಿಕಾರಿಗಳು ಕೆಲಸ ಮಾಡುತ್ತಾರೆ. ನಗರ ಪೊಲೀಸ್ ಆಯುಕ್ತರಾಗಿ ಅವರು ನಗರದಲ್ಲಿ ಹಲವೆಡೆ ಕೆಲಸ ಮಾಡಿರಬಹುದು. ಈಗಿನ ಆಯುಕ್ತರಾದ ಸುನೀಲ್ ಕುಮಾರ್ ನಗರವನ್ನು ಚೆನ್ನಾಗಿ ಬಲ್ಲರು.

 • ರಾಜಕೀಯ ಪಕ್ಷ ಅಥವಾ ಸರ್ಕಾರಗಳೆನ್ನದೆ, ಮುಖ್ಯಮಂತ್ರಿಗಳು ಗುಪ್ತಚರ ಇಲಾಖೆಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಗುಪ್ತಚರ ವೈಫಲ್ಯವಾಗಿ ಅಪರಾಧವಾದರೆ ಮುಖ್ಯಮಂತ್ರಿಯನ್ನೇ ಧೂಷಿಸಬೇಕಲ್ಲವೆ ?

ಇಲ್ಲ. ಮುಖ್ಯಮಂತ್ರಿಗೆ ಸಿಗುವಷ್ಟೇ ಮಾಹಿತಿ ಗೃಹಸಚಿವರಿಗೂ ಸಿಗುತ್ತದೆ. ಗುಪ್ತಚರ ಇಲಾಖೆ ಸಾಮಾಜಿಕ ಚಲನೆ, ಮೆರವಣಿಗೆ ಮತ್ತು ರೈತ ಪ್ರತಿಭಟನೆಗಳ ಮೇಲೆ ಕಣ್ಣಿಟ್ಟಿರುತ್ತದೆ. ಕೆಲವೊಮ್ಮೆ ವ್ಯವಸ್ಥಿತ ಅಪರಾಧಗಳು ರಾಜ್ಯದ ಹೊರಗೆ ಹೆಣೆದಿರಬಹುದಾದ ಕಾರಣ ತಿಳಿದು ಬರುವುದಿಲ್ಲ. ಅವುಗಳನ್ನು ಕಂಡುಕೊಳ್ಳುವುದೂ ಅಕ್ಷರಶಃ ಕಷ್ಟ.

 • ಅಲ್ಪಸಂಖ್ಯಾತರು ಮತ್ತು ಕೆಲವು ಸಂಘಟನೆಗಳ ಮೇಲಿನ ಪ್ರಕರಣಗಳನ್ನು ಸರ್ಕಾರ ಖುಲಾಸೆ ಮಾಡಿದೆ. ಅದೇ ಸಂಘಟನೆ ಮೇಲೆ ಮತ್ತೆ ಆರೋಪ ಬಂದಿದೆ.

ಸಚಿವ ಸಂಪುಟ ವಿವೇಕಯುತ ನಿರ್ಧಾರ ಕೈಗೊಂಡಿದೆ. ಅದಕ್ಕೆ ಮೊದಲು ಸಚಿವ ಸಂಪುಟ ಉಪ ಸಮಿತಿ ರಚಿಸಿ ಈ ಎಲ್ಲಾ ಪ್ರಕರಣಗಳನ್ನು ಗಮನಿಸಿದೆ. ರೈತರು ಕಾವೇರಿ ಮತ್ತು ರಾಜಕೀಯ ಕಾರಣಗಳಿಂದ ಪ್ರತಿಭಟಿಸಿದ್ದರು. ಇನ್ನು ಕೆಲವು ಪ್ರಕರಣಗಳು ಟಿಪ್ಪು ಸುಲ್ತಾನ್ ಪ್ರತಿಭಟನೆಯನ್ನು ಆಧರಿಸಿದ್ದ ಕಾರಣ ನಾವು ಮುಂದುವರಿಸಲು ಬಯಸಲಿಲ್ಲ. ಅದಕ್ಕೆ ತಕ್ಕಂತೆ ನಾವು ನಿರ್ಧಾರ ಕೈಗೊಂಡೆವು. ಗಂಭೀರವಾಗಿದ್ದ ಪ್ರಕರಣಗಳನ್ನು ನಾವು ಕ್ಷಮಿಸಿಲ್ಲ. ಕೊಲೆ ಆರೋಪ ಮತ್ತು ಸಾರ್ವಜನಿಕ ಆಸ್ತಿ ನಷ್ಟದ ಪ್ರಕರಣಗಳನ್ನು ಕ್ಷಮಿಸಿಲ್ಲ.

 • ಪೊಲೀಸರ ಪ್ರಕಾರ ಗೌರಿ ಲಂಕೇಶರ ಕೊಲೆ ಪ್ರಕರಣವು ಕಲಬುರ್ಗಿ ಕೊಲೆಯ ರೀತಿಯಲ್ಲೇ ಇದೆ. ಆದರೆ ರಾಜ್ಯ ಸರ್ಕಾರ ಕಲಬುರ್ಗಿ ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. ಗೌರಿ ಕೊಲೆಯನ್ನು ಹೇಗೆ ಸಿಬಿಐಗೆ ಕೊಡಲು ಸಿದ್ಧರಾದಿರಿ ?

ಕಲಬುರ್ಗಿ ಪ್ರಕರಣದಲ್ಲಿ ಅವರ ಕುಟುಂಬ ಸಿಬಿಐ ಒಳಗೊಳ್ಳುವುದನ್ನು ಬಯಸಲಿಲ್ಲ. ಗೌರಿ ಪ್ರಕರಣದಲ್ಲಿ ಕುಟುಂಬ ಬಯಸಿದಲ್ಲಿ ಸಿಬಿಐಗೆ ಒಪ್ಪಿಸಲು ಸಿದ್ಧರಿದ್ದೇವೆ ಎಂದಿದ್ದೇವೆ.

 • ಸಿಬಿಐಗೆ ಒಪ್ಪಿಸಿ ಅವರು ವಿಫಲವಾದಾಗ ಚುನಾವಣೆಯಲ್ಲಿ ಸಿಬಿಐನ್ನು ದೂರುವ ಉದ್ದೇಶವೆ ?

ಎಲ್ಲಾ ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ನಮ್ಮ ಪೊಲೀಸರು ಏನು ಮಾಡ್ತಾರೆ ? ಅಲ್ಲದೆ ಧಾಬೋಲ್ಕರ್ ಪ್ರಕರಣ ಸಿಬಿಐ ಕೈಯಲ್ಲಿದೆ. ಸನಾತನ ಸಂಸ್ಥೆಯ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆದರೆ ಗುಂಡಿಕ್ಕಿದವರು ಇನ್ನೂ ಸಿಕ್ಕಿಲ್ಲ. ಸಿಬಿಐ ಕೊಲೆಗಾರನನ್ನು ಪತ್ತೆ ಮಾಡಲಿದೆ ಎಂದು ಹೇಗೆ ಹೇಳುವಿರಿ ? ನಮ್ಮ ಪೊಲೀಸರು ಶೇ 99ರಷ್ಟು ಪ್ರಕರಣಗಳಲ್ಲಿ ಅಪರಾಧಿ ಪತ್ತೆ ಹಚ್ಚುತ್ತಾರೆ.

 •  ಬುದ್ಧಿಜೀವಿಗಳು ಮತ್ತು ಸಾಹಿತಿಗಳು ನಂಬಿಕೆ ಕಳೆದುಕೊಂಡಿದ್ದಾರೆ ?

ಅವರ ಆತಂಕ ಅರ್ಥವಾಗುತ್ತಿದೆ. ಕಲಬುರ್ಗಿ ಕೊಲೆಗಾರರನ್ನು ಪತ್ತೆ ಮಾಡಿದಲ್ಲಿ ಈ ಕೊಲೆಯಾಗುತ್ತಿರಲಿಲ್ಲ ಎನ್ನುವುದು ಅವರ ಭಾವನೆ. ಹೀಗಾಗಿ ನಾವು ತಕ್ಷಣವೇ ವಿಶೇಷ ತನಿಖಾ ದಳ ರಚಿಸಿದೆವು.

 • ಗೃಹಸಚಿವರ ಸಲಹೆಗಾರ ಕೆಂಪಯ್ಯ ಅವರು ನಿಮ್ಮ ಕೆಲಸದಲ್ಲಿ ಮೂಗು ತೂರಿಸಬಹುದು ಎನ್ನುವ ಸುದ್ದಿಯಿದೆ ?

ಅವರು ಭದ್ರತಾ ಸಲಹೆಗಾರರಷ್ಟೆ. ನಿರ್ಧಾರ ನನ್ನದೇ. ಸಚಿವ ಸಚಿವರೇ. ಯಾರೂ ಅಧಿಕಾರ ಕಸಿಯಲಾಗದು.