ವಿವಾದಿತ ಜಾಗಕ್ಕೆ ಅನತಿ ದೂರದಲ್ಲಿ ಭವ್ಯ ರಾಮ ವಿಗ್ರಹ : ಸೀಎಂ ಯೋಗಿ

ಲಕ್ನೋ : ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ರಾಮನ ಭವ್ಯ ವಿಗ್ರಹ ಸ್ಥಾಪಿಸಲು ಯೋಗಿ ಆದಿತ್ಯನಾಥ ಸರ್ಕಾರ ಪ್ರಸ್ತಾವಿಸಿದೆ. ಪ್ರಸ್ತಾವಿತ ಜಾಗ ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿಗಿಂತ ಸ್ವಲ್ಪ ದೂರದಲ್ಲಿದೆ. 100 ಮೀಟರ್ ಎತ್ತರದ ರಾಮ ವಿಗ್ರಹ ಸ್ಥಾಪಿಸಲು ಪ್ರಸ್ತಾವಿಸಲಾಗಿದ್ದು, ಇತರ ವಿನ್ಯಾಸದ ಬಗ್ಗೆ ದೀಪಾವಳಿ ಬಳಿಕ ನಿರ್ಧರಿಸಲಾಗುತ್ತದೆ. ಇದಕ್ಕಿಂತ ಮುಂಚೆ ಇಲ್ಲಿಗೆ ಸೀಎಂ ಆದಿತ್ಯನಾಥ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.