`ನನ್ನ ಹೆಸರಿನಲ್ಲೂ ರಾಮ ಇದ್ದಾನೆ’

ಬಿಜೆಪಿಗೆ ಸೀಎಂ ತಿರುಗೇಟು

 ನಮ್ಮ ಪ್ರತಿನಿಧಿ ವರದಿ

 ಕಾರವಾರ : ಉತ್ತರ ಕನ್ನಡದ ಜನತೆಯ ಮತಗಳನ್ನು ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಸೆಳೆಯಲು ಯತ್ನಿಸುತ್ತಿರುವುದನ್ನು ಮನಗಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಸರಿ ಪಕ್ಷಕ್ಕೆ ಅದರದೇ ಶೈಲಿಯಲ್ಲಿ ತಮ್ಮ ಜಿಲ್ಲಾ ಪ್ರವಾಸದ ವೇಳೆ ತಿರುಗೇಟು ನೀಡಿದ್ದಾರೆ. ಕಳೆದೆರಡು ದಿನಗಳ ತಮ್ಮ ಉತ್ತರ ಕನ್ನಡ ಪ್ರವಾಸದ ವೇಳೆ ಪ್ರತಿಯೊಂದು  ಸಭೆಯಲ್ಲೂ ಮುಖ್ಯಮಂತ್ರಿ ತಾನೊಬ್ಬ

`ನೈಜ ಹಿಂದು’ಎಂದು ಜನತೆಗೆ ಮನಗಾಣಿಸುವ ಯತ್ನ ನಡೆಸಿದ್ದಾರೆ. “ಅನಂತ್ ಕುಮಾರ್ ಹೆಗಡೆ ಅವರಂತಹ ನಾಯಕರು ಯಾವತ್ತೂ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸುತ್ತಿದ್ದಾರೆ, ನಮ್ಮನ್ನು ಹಿಂದು-ವಿರೋಧಿ ಎಂದು ಹೇಳುತ್ತಿದ್ದಾರೆ. ನಾವು ಕೂಡ ಹಿಂದುಗಳಲ್ಲವೇನು ? ನನ್ನ ಹೆಸರು ಸಿದ್ದರಾಮ. ನನ್ನ ಹೆಸರಿನಲ್ಲೂ ಶ್ರೀ ರಾಮನ ಹೆಸರಿದೆ. ನಾವು ಶ್ರೀ ರಾಮ ಹಾಗೂ ಹನುಮಾನ್ ಭಕ್ತರು. ಬಸವಣ್ಣ ಹಾಗೂ ಬುದ್ಧನ ಅನುಯಾಯಿಗಳು. ಯಾವ ಹಬ್ಬವನ್ನೂ ಆಚರಿಸದಂತೆ ನಾವು ತಡೆದಿಲ್ಲ, ಎಲ್ಲಾ ಧರ್ಮಗಳನ್ನು ಪ್ರೀತಿಸುವವನೇ ನಿಜವಾದ ಹಿಂದು. ಯಾರು ನಿಜವಾದ ಹಿಂದುಗಳೆಂದು ನೀವೇ ತೀರ್ಮಾನಿಸಿ. ನಾವೇ ಅಥವಾ ಬಿಜೆಪಿ ನಾಯಕರೇ ?” ಎಂದು ಮುಖ್ಯಮಂತ್ರಿ ಜನತೆಯನ್ನು ಕೇಳಿದ್ದಾರೆ.

ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಕೂಡ ಸಭೆಯೊಂದರಲ್ಲಿ “ನಾನು  ಹುಟ್ಟಿನಿಂದ ಹಿಂದು, ಎಲ್ಲಾ ಜನರೂ ನನ್ನ ಬಂಧುಗಳೆಂದು ತಿಳಿಯುತ್ತೇ£” ಎಂದೂ ಹೇಳಿಕೊಂಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಯಡ್ಯೂರಪ್ಪ ಅವರ ಪರಿವರ್ತನಾ ರ್ಯಾಲಿ ಉತ್ತರ ಕನ್ನಡದಲ್ಲಿ ಸಂಚರಿಸಿದ ಸಂದರ್ಭ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಹಿಂದುತ್ವದ ನಾಯಕನೆಂಬಂತೆ  ಬಿಂಬಿಸಿರುವುದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನ ಈ ಕಸರತ್ತು ನಡೆದಿದೆ.

LEAVE A REPLY