ಕನ್ನಡಿಗರ ಭಾಷಾಭಿಮಾನವನ್ನೇ ಕೆಣಕಿದ ರಾಮಗೋಪಾಲ

ಮುಂಬೈ : “ಬಾಹುಬಲಿ-2 ತೆಲುಗು ಚಿತ್ರ ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳಿಗಿಂತ ಸೂಪರ್ ಹಿಟ್ ಆಗಿರುವುದು ಕನ್ನಡಿಗರಿಗೆ ಅಭಿಮಾನವೇ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ” ಎಂದು ಕನ್ನಡಿಗರನ್ನು ವ್ಯಂಗ್ಯವಾಡಿ ಸರಣಿ ಟ್ವೀಟ್ ಮಾಡಿರುವ ಖ್ಯಾತ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ವಿವಾದಕ್ಕೀಡಾಗಿದ್ದಾರೆ.

“ಕನ್ನಡಿಗರು ಡಬ್ಬಿಂಗ್ ಚಿತ್ರ ನಿಲ್ಲಿಸಲು ಮಾಡುತ್ತಿರುವ ಪ್ರಯತ್ನವನ್ನು ತೆಲುಗು ಚಿತ್ರವೊಂದು ನುಚ್ಚುನೂರು ಮಾಡಿದೆ” “ಕನ್ನಡ ಚಿತ್ರದ ಬದಲು ತೆಲುಗು ಚಿತ್ರವನ್ನೇ ಹೆಚ್ಚು ನೋಡಿದ್ದಕ್ಕೆ ಕನ್ನಡಿಗರು ತಮ್ಮವರ ವಿರುದ್ಧವೇ ಹೋರಾಡಬೇಕು” ಎಂಬರ್ಥದ ಹಲವು ಟ್ವೀಟುಗಳನ್ನು ಮಾಡಿ ವರ್ಮ ಕರ್ನಾಟಕದವರ ಕನ್ನಡಾಭಿಮಾನವನ್ನೇ ಪ್ರಶ್ನಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.