ರಾಜು ಕನ್ನಡ ಮೀಡಿಯಂನಲ್ಲಿ ಸುದೀಪ್ ಖಳನಾಯಕ

ಸುದೀಪ್ ಶಿವರಾಜಕುಮಾರ್ ಜೊತೆಸೇರಿ `ವಿಲನ್’ ಚಿತ್ರದಲ್ಲಿ ನಟಿಸುವುದು ಗೊತ್ತೇ ಇದೆ. ಆ ಚಿತ್ರದಲ್ಲಿ ಸುದೀಪ್ ವಿಲನ್ ಹೌದೋ ಅಲ್ವೋ, ಆದರೆ `ರಾಜು ಕನ್ನಡ ಮೀಡಿಯಂ’ ಸಿನಿಮಾದಲ್ಲಿ ಸುದೀಪ್ ಖಳನಾಯಕ.

ಗುರುನಂದನ್ ಹಾಗೂ ಆವಂತಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ `ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಸುದೀಪ್ ಆ ಜೋಡಿಯನ್ನು ಇನ್ನಿಲ್ಲದಂತೆ ಕಾಡುತ್ತಾನಂತೆ. ಈ ಪಾತ್ರದ ಗೆಟಪ್ ಹೆಚ್ಚೂ ಕಡಿಮೆ ಉದ್ಯಮಿ ವಿಜಯ್ ಮಲ್ಯನ ಕಲರ್ ಫುಲ್ ವ್ಯಕ್ತಿತ್ವದ ರೀತಿಯಲ್ಲಿ ಬಿಂಬಿಸಲಾಗಿದೆಯಂತೆ. ನರೇಶ್ ಕುಮಾರ್ ಈ ಸಿನಿಮಾದ ನಿರ್ದೇಶಕರಾಗಿದ್ದು ಚಿತ್ರ ಮುಂದಿನ ಶುಕ್ರವಾರ ತೆರೆಕಾಣಲಿದೆ.

 

LEAVE A REPLY