ಗರ್ಲ್ಫ್ರೆಂಡ್ ಜೊತೆ ರಾಜಕುಮಾರ್ ವೆಬ್ ಸರಣಿ

ಈ ಕಂಪ್ಯೂಟರ್ ಯುಗದಲ್ಲಿ ವೆಬ್ ಸೀರೀಸ್ ಕೂಡಾ ಸಿನಿಮಾ, ಸೀರಿಯಲ್ಲಷ್ಟೇ ಪೊಪ್ಯುಲರ್ ಆಗುತ್ತಿದೆ. ರಾಜಕುಮಾರ್ ರಾವ್ ಈಗ ಹನ್ಸಲ್ ಮೆಹ್ತಾರ ಸಾರಥ್ಯದಲ್ಲಿ ಸುಭಾಸ್ ಚಂದ್ರ ಭೋಸ್ ಜೀವನಾಧರಿತ `ಬೋಸ್ ಡೆಡ್ ಆರ್ ಅಲೈವ್’ ವೆಬ್ ಸಿರೀಸಿನಲ್ಲಿ ನಟಿಸುತ್ತಿದ್ದು ಇದರಲ್ಲಿ ಆತನ ಗರ್ಲ್‍ಫ್ರೆಂಡ್ ಪತ್ರಲೇಖಾ ಕೂಡಾ ಪಾತ್ರಧಾರಿಯಾಗಿದ್ದಾಳೆ.

ರಾಜಕುಮಾರ್ ಹಾಗೂ ಪತ್ರಲೇಖಾ 2014ರಲ್ಲಿ ರಿಲೀಸ್ ಆಗಿದ್ದ `ಸಿಟಿಲೈಟ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು ಆಗಿಂದಲೇ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಈಗ ಬೋಸ್ ಕುರಿತಾದ ವೆಬ್ ಸರಣಿಯಲ್ಲಿ ರಾಜಕುಮಾರ್ ರಾವ್ ಟೈಟಲ್ ರೋಲ್ ನಿರ್ವಹಿಸುತ್ತಿದ್ದರೆ ಪತ್ರಲೇಖಾ ಚಾರ್ಮಿಂಗ್ ಮಹಿಳೆ ನಂದಿನಿಯಾಗಿ ನಟಿಸುತ್ತಿದ್ದು ಆಕೆ ಭೋಸ್ ಅವರ ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಮಾರುಹೋಗಿರುವ ಅಭಿಮಾನಿಯಾಗಿದ್ದಾಳೆ. ಈ ಸರಣಿ ಈ ತಿಂಗಳ 20ಕ್ಕೆ ಅಪ್ಲೋಡ್ ಆಗಲಿವೆ.

ರಾಜಕುಮಾರ್ ರಾವ್ `ನ್ಯೂಟನ್’, `ಬರೇಲಿ ಕಿ ಬರ್ಫಿ’ ಸಿನಿಮಾಗಳ ಸಕ್ಸಸ್ಸಿನ ಖುಶಿಯಲ್ಲಿದ್ದು ಆತನ ಕಳೆದ ವಾರ ರಿಲೀಸ್ ಆದ `ಶಾದೀ ಮೆ ಜರೂರ್ ಆನಾ’ ಚಿತ್ರವೂ ತಕ್ಕಮಟ್ಟಿನ ಯಶ ಕಂಡಿದೆ. ಪತ್ರಲೇಖಾ ಜೊತೆ ಸೀರಿಯಸ್ ಸಂಬಂಧದಲ್ಲಿರುವ ರಾವ್ ಆಕೆಯನ್ನು ಮದುವೆಯಾಗುವ ಬಗ್ಗೆ ಕೇಳಲಾದ ಪ್ರಶ್ನೆಗೆ `ಮದುವೆಯಾಗುವುದು ಗ್ಯಾರೆಂಟಿ. ಆದರೆ ಇಬ್ಬರೂ ಸದ್ಯ ವೃತ್ತಿ ಜೀವನದ ಬಗ್ಗೆಯೇ ಗಮನಹರಿಸಿರುವುದರಿಂದ ಕೂಡಲೇ ಮದುವೆಯಾಗುವ ಯೋಚನೆಯಿಲ್ಲ’ ಎಂದಿದ್ದಾನೆ. ಅಂದ ಹಾಗೆ ಪತ್ರಲೇಖಾ ಕೂಡಾ ಈಗ ಅಭಯ್ ಡಿಯೋಲ್ ಜೊತೆ `ನಾನು ಕಿ ಜಾನು’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾಳೆ.