ಕೊನೆಯ ಹಂತದಲ್ಲಿ `ರಾಜ ಲವ್ಸ್ ರಾಧೆ’

ವಿಜಯ ರಾಘವೇಂದ್ರನ ಮುಂದಿನ ಚಿತ್ರ `ರಾಜ ಲವ್ಸ್ ರಾಧೆ’ಯ ಚಿತ್ರೀಕರಣ ಬಹುತೇಕ ಮುಗಿದಿದ್ದು ಇನ್ನು ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ. ಚಿತ್ರದ ಟೈಟಲ್ ರೋಲ್ ರಾಜನಾಗಿ ಈತ ರೊಮ್ಯಾನ್ಸ್ ಮಾಡಲಿದ್ದಾನೆ.

ಇದೊಂದು ರೊಮ್ಯಾಂಟಿಕ್ ಕಾಮಿಡಿಯಾಗಿದ್ದು `ನಾ ಪಂಟ ಕಣೋ’ ಚಿತ್ರದ ಹೀರೋಯಿನ್ ಆಗಿದ್ದ ರಿತಿಕ್ಷಾ ಈ ಸಿನಿಮಾದಲ್ಲಿ ರಾಜನ ರಾಧೆಯಾಗಿದ್ದಾಳೆ. ರಾಜಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ಟ್ಯಾಗ್ಲೈನ್ ಕೂಡಾ ರೊಮ್ಯಾಂಟಿಕ್ ಆಗಿದ್ದು `ಎರಡು ಮನಸುಗಳ ತಲ್ಲಾನ’ ಎಂದಾಗಿದೆ.

ಸಿನಿಮಾದಲ್ಲಿ ಶುಭಾ ಪೂಂಜಾ, ಮಿತ್ರ, ತಬಲಾ ನಾಣಿ, ರವಿಶಂಕರ್ ಮೊದಲಾದವರಿದ್ದಾರೆ. ಸಿನಿಮಾ ಮೂರು ತಿಂಗಳಲ್ಲಿ ತೆರೆಕಾಣುವ ನಿರೀಕ್ಷೆ ಇದೆ.