ವಿಲನ್ ಪಾತ್ರದಲ್ಲಿ ರಾಜ್ ಶೆಟ್ಟಿ

`ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ ಏಕ್‍ದಂ ಖ್ಯಾತಿ ಗಳಿಸಿರುವ ರಾಜ್ ಬಿ ಶೆಟ್ಟಿ ಈಗ ವಿಲನ್ ಆಗಿ ತೆರೆಮೇಲೆ ಬರಲಿದ್ದಾರೆ. ತನ್ನ ಮೊದಲ ಚಿತ್ರವನ್ನು ತಾನೇ ನಿರ್ದೇಶಿಸಿ ನಟಿಸಿದ್ದ ರಾಜ್ ಈಗ ವಿಭಿನ್ನ ಪಾತ್ರಗಳ ಮೂಲಕ ಹೆಸರು ಮಾಡಲು ಮುಂದಾಗಿದ್ದಾರೆ.

ಅವರು ನಟಿಸುತ್ತಿರುವ ಮುಂದಿನ ಸಿನಿಮಾದ ಶೀರ್ಷಿಕೆ `ಅಮ್ಮಚಿ ಎಂಬ ನೆನಪು’ ಎಂದಾಗಿದ್ದು ಇದರಲ್ಲಿ ರಾಜ್ ನೆಗೆಟಿವ್ ಪಾತ್ರದಲ್ಲಿ ತೆರೆಯ ಮೇಲೆ ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ಕುಂದಾಪುರ ಕನ್ನಡದ ಸೊಗಡಿದೆ. ರಂಗಭೂಮಿ ಹಿನ್ನೆಲೆಯಿರುವ ಪ್ರಕಾಶ್ ಪಿ ಶೆಟ್ಟಿ ಅವರ ಪತ್ನಿ ಚಂಪಾ ಪಿ ಶೆಟ್ಟಿ ಈ ಚಿತ್ರನಿರ್ಮಿಸಿದ್ದು ಇದರಲ್ಲಿ ಬಹಳಷ್ಟು ಮಂದಿ ನಾಟಕ ಕಲಾವಿದರು ನಟಿಸಿದ್ದಾರೆ.

 

LEAVE A REPLY