ನದಿ ನೀರು ಕೃಷಿಗೆ ಬಳಸದಂತೆ ಡೀಸಿ ಆದೇಶದ ವಿರುದ್ಧ ರೈತಸಂಘ ಆಕ್ರೋಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ
ಪುತ್ತೂರು : ನೇತ್ರಾವತಿ ಹಾಗೂ ಕುಮಾರಧಾರಾ ನದಿ ನೀರನ್ನು ಕೃಷಿ ಚಟುವಟಿಕೆಗೆ ಬಳಸದಂತೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದು  ಇದರ ವಿರುದ್ಧ ಜಿಲ್ಲಾ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ
ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ರೈತರ ಬದುಕಿನ ಜೊತೆ ಚೆಲ್ಲಾಟವಾಡಿದರೆ ಜಿಲ್ಲಾಧಿಕಾರಿಯನ್ನು ಜಿಲ್ಲೆಯಿಂದಲೇ ಓಡಿಸುತ್ತೇವೆ  ಎಂದು ರೈತ ಸಂಘದ ಶ್ರೀಧರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ
ಅನಾಧಿ ಕಾಲದಿಂದಲೂ ರೈತರು ಈ ಎರಡು ನದಿಗಳ ನೀರನ್ನು ಕೃಷಿಗೆ ಬಳಸುತ್ತಿದ್ದಾರೆ  ನದಿ ನೀರೇ ಕೃಷಿಗೆ ಮೂಲ ಆಧಾರವಾಗಿದೆ  ಈ ವಿಚಾರ ಜಿಲ್ಲಾಧಿಕಾರಿಗೆ ಗೊತ್ತಿದೆ  ಆದರೂ ರೈತರನ್ನು ನಾಶ ಮಾಡುವ ಉದ್ದೇಶದಿಂದ ಈ ರೀತಿಯ ನಿಷೇಧ ಜಾರಿ ಮಾಡಿದ್ದಾರೆ  ಒಂದು ಕಡೆ ಬೋರ್ವೆಲ್ ತೆಗೆಯುವುದಕ್ಕೂ ನಿಷೇಧವಿದ್ದು  ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ  ಇದೀಗ ಮತ್ತೆ ನದಿ ನೀರು ಬಳಸದಂತೆ ನಿಷೇಧ ಮಾಡಿದ್ದು ಸರಿಯಲ್ಲ  ಆದೇಶವನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡುತ್ತೇವೆ  ಜಿಲ್ಲಾಧಿಕಾರಿ ತಮಗೆ ಇಷ್ಟ ಬಂದಂತೆ ಆದೇಶ ಮಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು ಯಾಕೆ  ಎಂದು ಶೆಟ್ಟಿ ಪ್ರಶ್ನಿಸಿದ್ದಾರೆ
ಡೀಸಿ ಆದೇಶದಿಂದ ರೈತರು ಬದುಕುವ ಹಕ್ಕನ್ನು ಕಸಿದುಕೊಂಡಂತಾಗಿದೆ  ಎಂದು ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ