ಮೋಡ ಬಿತ್ತನೆಯಿಂದ ಉ.ಕ. ಹಲವೆಡೆ ಮಳೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಕಳೆದ ಎರಡ್ಮೂರು ದಿನಗಳಿಂದ ಹುಬ್ಬಳ್ಳಿ ಕೇಂದ್ರವಾಗಿಸಿಕೊಂಡು ಹಳಿಯಾಳ, ಶಿರಸಿ, ಮುಂಡಗೋಡ ಭಾಗಗಳಿಗೆ ಮೋಡ ಬಿತ್ತನೆ ಮಾಡಿದ್ದು, ಎರಡ್ಮೂರು ದಿನಗಳಿಂದ ಆಗಾಗ ಮಳೆ ಬಂದು ಹೋಗುವಂತಾಗಿದೆ.

ಈ ಮೊದಲು ಸಾಮಾನ್ಯ ಮಳೆಯೆಂದೇ ಜನರು ಭಾವಿಸಿದ್ದರೂ ನಂತರ ಆಕಾಶದಲ್ಲಿ ವಿಮಾನ ಹಾರಾಟದ ಶಬ್ಧವೂ ಕೇಳಲಾರಂಭಿಸಿತು. ಬಳಿಕ ಅದರ ಬಗ್ಗೆ ಸಂಬಂಧಪಟ್ಟವರ್ನು ವಿಚಾರಿಸಿದಾಗ ಅದು ಮೋಡ ಬಿತ್ತನೆಯೆಂಬುದು ತಿಳಿದುಬತು. 3 ದಿನಗಳ ಹಿಂದೆ ಪ್ರಥಮ ಬಾರಿ ಮೋಡ ಬಿತ್ತನೆ ನಡೆದಾಗ ಗುಡುಗು ಸಹಿತ ಮಳೆಯೇ ಬಿದ್ದಿದ್ದವು. ಗುರುವಾರ ಮಧ್ಯಾಹ್ನ ಮೋಡ ಬಿತ್ತನೆ ಮಾಡಿದ್ದು, ಮಧ್ಯಾಹ್ನ 3ರ ನಂತರ ಸಂಜೆಯವರೆಗೂ ಮಳೆ ಆಗಾಗ ಬಂದು ಹೋಗಿದ್ದವು. ಶುಕ್ರವಾರ ಬೆಳಿಗ್ಗೆ ಸಹ ಸಣ್ಣ ಮಳೆ ಸಿಂಚನ ಮುಂದುವರಿದಿದೆ. ಹಳಿಯಾಳ, ಮುಂಡಗೋಡ ಭಾಗದಲ್ಲೂ ಮಳೆಯಾಗಿದೆಯೆಂಬ ಮಾಹಿತಿ ಲಭ್ಯವಾಗಿದೆ. “ಪ್ರಥಮ ಬಾರಿ ಉ ಕ.ದಲ್ಲೂ ಮೋಡ ಬಿತ್ತನೆ ನಡೆದಿರುವುದು ವಿಶೇಷವಾಗಿದೆ.